62ನೇ ರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ ಪ್ರಕಟ: ಹೈದರ್‌ಗೆ ಬಂಪರ್

ಗುರುವಾರ, 26 ಮಾರ್ಚ್ 2015 (10:00 IST)
ರಾಷ್ಟ್ರೀಯ ಪ್ರಶಸ್ತಿ ಗಳಿಸಿ ಸಂಭ್ರಮಿಸುತ್ತಿದ್ದಾರೆ ಚಿತ್ರರಂಗದವರು. ಕನ್ನಡ ಸೇರಿದಂತೆ ಭಾರತದ ಎಲ್ಲ ಭಾಷೆಯ ಉತ್ತಮ ಚಲನ ಚಿತ್ರ, ಉತ್ತಮ ನಿರ್ದೇಶನ, ಕಲಾವಿದರಿಗೆ ಪ್ರಶಸ್ತಿಯ ಗರಿ ಏರಿದೆ. ಕನ್ನಡದಲ್ಲಿ ಸಂಚಾರಿ ವಿಜಯ್ ಅವರ ಅಭಿನಯದ ನಾನು ಅವನಲ್ಲ ಅವಳು ಚಿತ್ರದ ನಟನೆಗೆಂದು ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. 
ಉತ್ತಮ ಚಲನ ಚಿತ್ರ ಕೋರ್ಟ್(ಮರಾಠಿ, ಹಿಂದಿ, ಗುಜರಾತಿ, ಹಿಂದಿ, ಇಂಗ್ಲೀಷ್), ಅತಿ ಹೆಚ್ಚಿನ ಜನರ  ಮನ ಗೆದ್ದ ಚಿತ್ರ ಮೇರಿಕೊಂ(ಹಿಂದಿ), ಉತ್ತಮ ನಟಿ ಕಂಗನಾ(ಕ್ವೀನ್ ಹಿಂದಿ), ಉತ್ತಮ ನಿರ್ದೇಶಕ-ಶ್ರೀಜಿತ್ ಮುಖರ್ಜಿ(ಛೋತುಶ್ಕೊಮೆ, ಬೆಂಗಾಲಿ), ಉತ್ತಮ ಪೋಷಕನಟ ಬಾಬಿ ಸಿಂಹ(ಜಗರ್ತಾಂಡ, ತಮಿಳು), ಉತ್ತಮ ಪೋಷಕ ನಟಿ-ಬಲ್ಜಿಂದರ್ ಕೌರ್(ಪಗಿಡಿದಹೆನರ್ ಹರಿಯಾಣ), ಬಾಲನಟ-ಜೆ.ವಿಘ್ನೇಶ್, ರಮೇಶ್(ಕಾಕ್ಕಾ ಮುತ್ತಿ, ತಮಿಳು), ಛಾಯಾಗ್ರಹಣ-ಸುದೀಪ್ ಚಟರ್ಜಿ(ಛೋತುಶ್ಕೊಮೆ, ಬೆಂಗಾಲಿ), ಸಂಗೀತ ನಿರ್ದೇಶಕ-ವಿಶಾಲ್ ಭಾರದ್ವಾಜ್(ಹೈದರ್), ಹಿನ್ನೆಲೆ ಗಾಯಕ-ಸುಖ್ವಿಂದರ್ ಸಿಂಗ್(ಹೈದರ್), ಸಂಭಾಷಣೆ-ವಿಶಾಲ್ ಭಾರದ್ವಾಜ್(ಹೈದರ್), ನೃತ್ಯ ನಿರ್ದೇಶನ-ಹೈದರ್, ವಸ್ತ್ರ ವಿನ್ಯಾಸ-ಡಾಲಿ ಅಹ್ಲೂವಾಲಿಯ(ಹೈದರ್), ಗೀತ ರಚನೆಹಾರ-ಎಸ್.ವಿ.ಮುತ್ತುಕುಮಾರ್(ಶೈವಂ, ತಮಿಳು), ಮಕ್ಕಳ ಚಿತ್ರ-ಕಾಕ್ಕಮುತ್ತೈ(ತಮಿಳು), ಎಲಿಜಬೆತ್ ಏಕಾದಶಿ (ಮರಾಠಿ), ಹಿನ್ನೆಲೆ ಗಾಯಕಿ-ಉತ್ತರ ಉನ್ನಿ ಕೃಷ್ಣನ್(ಶೈವಂ ತಮಿಳು), ಸಂಕಲನ-ವಿವೇಕ್ ಹರ್ಷನ್(ಜಗರ್ತಾಂಡ), ಸ್ಥಳೀಯ ಉತ್ತಮ ಚಿತ್ರಗಳು-ಚಂದಮಾಮ ಕಥೆಗಳು(ತೆಲುಗು), ನಿರ್ದೇಶಕ-ಪ್ರವೀಣ್ ಸತ್ತಾರ್(ಕ್ವೀನ್-ಹಿಂದಿ), ಹರಿವು(ಕನ್ನಡ), ಕುತ್ತರಂ ಕಡಿತ್ತಲ್(ತಮಿಳು), ಆಯಿನ್(ಮಲೆಯಾಳಂ), ಖಿಲಾ(ಮರಾಠಿ), ಆದಿಂ ವಿಚಾರ(ಒಡಿಯಾ), ಪಂಜಾಬ್ 1984(ಪಂಜಾಬಿ). 
 

ವೆಬ್ದುನಿಯಾವನ್ನು ಓದಿ