68th Films Fare Awards: 68 ನೇ ಫಿಲ್ಮ್ ಫೇರ್ ಅವಾರ್ಡ್ಸ್ ಘೋಷಣೆ: ಪ್ರಶಸ್ತಿ ಗೆದ್ದವರ ಲಿಸ್ಟ್ ಇಲ್ಲಿದೆ

Krishnaveni K

ಶುಕ್ರವಾರ, 12 ಜುಲೈ 2024 (16:36 IST)
ಬೆಂಗಳೂರು: 2023 ರ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ಅವಾರ್ಡ್ಸ್ 2023 ರ 68 ನೇ ಆವೃತ್ತಿಗೆ ಫಿಲ್ಮ್‌ಫೇರ್ ವಿಜೇತರನ್ನು ಘೋಷಿಸಿದೆ. 
 
ಕನ್ನಡ ಸಿನಿಮಾದ ಅಸಾಧಾರಣ ಸಾಧನೆಗಾಗಿ, 777 ಚಾರ್ಲಿ ಚಿತ್ರಕ್ಕಾಗಿ ಕಿರಣ್‌ರಾಜ್ ಕೆ ಅವರಿಗೆ ಕನ್ನಡದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ನೀಡಲಾಯಿತು. ಕಾಂತಾರ ಕನ್ನಡದ ಅತ್ಯುತ್ತಮ ಚಿತ್ರ ಎಂದು ಹೆಸರಿಸಲ್ಪಟ್ಟಿತು. ಗಮನಾರ್ಹವಾಗಿ, ಚೈತ್ರಾ ಜೆ ಆಚಾರ್ ಅವರು ತಲೆದಂಡ ಚಿತ್ರದಲ್ಲಿನ ಪಾತ್ರಕ್ಕಾಗಿ ಕನ್ನಡದ ಲೀಡಿಂಗ್‌ ರೋಲ್‌ (ಮಹಿಳೆ) ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಅಂತಿಮವಾಗಿ, ಬ್ಲಾಕ್‌ಬಸ್ಟರ್ ಚಲನಚಿತ್ರ ಕಾಂತಾರದಲ್ಲಿನ ಅದ್ಭುತ ಅಭಿನಯಕ್ಕಾಗಿ ರಿಷಬ್ ಶೆಟ್ಟಿ, ಕನ್ನಡದ ಲೀಡಿಂಗ್‌ ರೋಲ್‌ (ಪುರುಷ) ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರು.
 
ತೆಲುಗು ಚಿತ್ರರಂಗಕ್ಕೆ, ಮುಖ್ಯವಾಗಿ, ಆರ್‌ಆರ್‌ಆರ್‌, ಅತ್ಯುತ್ತಮ ತೆಲುಗು ಚಲನಚಿತ್ರ ಎಂಬ ಪ್ರಶಸ್ತಿಯನ್ನು ಪಡೆದಿದೆ. ಆರ್‌ಆರ್‌ಆರ್‌ ನಲ್ಲಿ ಅವರ ಮನಮುಟ್ಟುವ ಅಭಿನಯಕ್ಕಾಗಿ, ಜ್ಯೂನಿಯರ್‌ ಎನ್.ಟಿ.ಆರ್ ಮತ್ತು ರಾಮ್ ಚರಣ್ ಅವರು ತೆಲುಗು ವಿಭಾಗದ ಲೀಡಿಂಗ್‌ ರೋಲ್‌ (ಪುರುಷ) ಅತ್ಯುತ್ತಮ ನಟ ವಿಭಾಗದ ಅಡಿಯಲ್ಲಿ ವಿಜೇತರಾಗಿದ್ದಾರೆ. ಮತ್ತು ಸೀತಾ ರಾಮಂ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಮೃಣಾಲ್ ಠಾಕೂರ್ ಅವರಿಗೆ ತೆಲುಗು ವಿಭಾಗದ ಲೀಡಿಂಗ್‌ ರೋಲ್‌ (ಮಹಿಳೆ) ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಇದಲ್ಲದೆ, ನಿರ್ದೇಶಕ S. S. ರಾಜಮೌಳಿ ಅವರು RRR ಗಾಗಿ ಪಾಪ್ಯುಲರ್ ಚಾಯ್ಸ್ ತೆಲುಗು ವಿಭಾಗದಿಂದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
 
ತಮಿಳು ಸಿನಿಮಾದ ಅಸಾಧಾರಣ ಪ್ರಯತ್ನವಾಗಿ, ಪೊನ್ನಿಯಿನ್ ಸೆಲ್ವನ್ ಭಾಗ 1, ಅತ್ಯುತ್ತಮ ತಮಿಳು ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನಿರ್ದೇಶಕ ಮಣಿರತ್ನಂ ಅವರ ಸೂಪರ್ ಹಿಟ್ ಚಿತ್ರ ಪೊನ್ನಿಯಿನ್ ಸೆಲ್ವನ್ ಭಾಗ 1 ಗಾಗಿ ಪಾಪ್ಯುಲರ್ ಚಾಯ್ಸ್ ತಮಿಳಿನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ. ನಟ ಕಮಲ್ ಹಾಸನ್ ಮತ್ತು ನಟಿ ಸಾಯಿ ಪಲ್ಲವಿ ಅವರಿಗೆ ಕ್ರಮವಾಗಿ ವಿಕ್ರಮ್ ಮತ್ತು ಗಾರ್ಗಿಯಲ್ಲಿನ ಅದ್ಭುತ ಅಭಿನಯಕ್ಕಾಗಿ ತಮಿಳು ವಿಭಾಗದ ಲೀಡಿಂಗ್‌ ರೋಲ್‌ ಅತ್ಯುತ್ತಮ ನಟ (ಪುರುಷ) ಮತ್ತು ಲೀಡಿಂಗ್‌ ರೋಲ್‌ (ಮಹಿಳೆ) ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಗಿದೆ.
 
ಮಲಯಾಳಂ ಸಿನಿಮಾದ ಸಾಧನೆಗಾಗಿ, ಜಯ ಜಯ ಜಯ ಜಯ ಹೇ ಚಿತ್ರದಲ್ಲಿನ ಅವರ ಅದ್ಬುತ ಅಭಿನಯಕ್ಕಾಗಿ ದರ್ಶನಾ ರಾಜೇಂದ್ರನ್ ಅವರು ಮಲಯಾಳಂ ವಿಭಾಗದ ಲೀಡಿಂಗ್‌ ರೋಲ್‌ (ಮಹಿಳೆ) ಅತ್ಯುತ್ತಮ ನಟಿ ಎಂದು ಗುರುತಿಸಲ್ಪಟ್ಟರು. ಎನ್ನ ತಾನ್ ಕೇಸ್ ಕೊಡು ಚಿತ್ರದಲ್ಲಿ ಕುಂಚಾಕೊ ಬೋಬನ್ ಅವರು ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಮಲಯಾಳಂ ವಿಭಾಗದ ಲೀಡಿಂಗ್‌ ರೋಲ್‌ (ಪುರುಷ) ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಮಲಯಾಳಂ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಎನ್ನ ತಾನ್ ಕೇಸ್ ಕೊಡು ಚಲನಚಿತ್ರ ತನ್ನದಾಗಿಸಿಕೊಂಡಿತು. ಮತ್ತು ಅಂತಿಮವಾಗಿ, ಮಲಯಾಳಂನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ರತೀಶ್ ಬಾಲಕೃಷ್ಣನ್ ಪೊದುವಾಲ್ ಅವರು ಎನ್ನ ತಾನ್ ಕೇಸ್ ಕೊಡು ಚಿತ್ರಕ್ಕಾಗಿ ಪಡೆದರು.
 
68 ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2023 ವಿಜೇತರ ಪಟ್ಟಿಯನ್ನು ಈ ಕೆಳಗೆ ಪರಿಶೀಲಿಸಿ:
 
ಕನ್ನಡ ಪ್ರಶಸ್ತಿಗಳ ವಿಭಾಗದ ವಿಜೇತರು
 
ಅತ್ಯುತ್ತಮ ಚಿತ್ರ
ಕಾಂತಾರ
 
ಅತ್ಯುತ್ತಮ ನಿರ್ದೇಶಕ
ಕಿರಣ್‌ರಾಜ್ ಕೆ (777 ಚಾರ್ಲಿ)
 
ಅತ್ಯುತ್ತಮ ಚಲನಚಿತ್ರ (ವಿಮರ್ಶಕರು)
ಧರಣಿ ಮಂಡಲ ಮಧ್ಯದೊಳಗೆ (ಶ್ರೀಧರ್ ಶಿಕಾರಿಪುರ)
 
ಲೀಡಿಂಗ್‌ ರೋಲ್‌ ಅತ್ಯುತ್ತಮ ನಟ (ಪುರುಷ)
ರಿಷಬ್ ಶೆಟ್ಟಿ (ಕಾಂತಾರ)
 
ಅತ್ಯುತ್ತಮ ನಟ (ವಿಮರ್ಶಕರು)
ನವೀನ್ ಶಂಕರ್ (ಧರಣಿ ಮಂಡಲ ಮಧ್ಯದೊಳಗೆ)
 
ಲೀಡಿಂಗ್‌ ರೋಲ್‌ ಅತ್ಯುತ್ತಮ ನಟಿ (ಮಹಿಳೆ)
ಚೈತ್ರ ಜೆ ಆಚಾರ್ (ತಲೆದಂಡ)
 
ಅತ್ಯುತ್ತಮ ನಟಿ (ವಿಮರ್ಶಕರು)
ಸಪ್ತಮಿ ಗೌಡ (ಕಾಂತಾರ)
 
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ)
ಅಚ್ಯುತ್ ಕುಮಾರ್ (ಕಾಂತಾರ)
 
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ)
ಮಂಗಳಾ ಎನ್ (ತಲೆದಂಡ)
 
ಅತ್ಯುತ್ತಮ ಸಂಗೀತ ಆಲ್ಬಮ್
ಬಿ ಅಜನೀಶ್ ಲೋಕನಾಥ್ (ಕಾಂತಾರ)
 
ಅತ್ಯುತ್ತಮ ಸಾಹಿತ್ಯ
ವಿ. ನಾಗೇಂದ್ರ ಪ್ರಸಾದ್ (ಬೆಳಕಿನ ಕವಿತೆ- ಬನಾರಸ್)
 
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ)
ಸಾಯಿ ವಿಘ್ನೇಶ್ (ವರಾಹ ರೂಪ-ಕಾಂತಾರ)
 
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ)
ಸುನಿಧಿ ಚೌಹಾಣ್ (ರಾ ರಾ ರಕ್ಕಮ್ಮ- ವಿಕ್ರಾಂತ್ ರೋಣ)
 
ತೆಲುಗು ಪ್ರಶಸ್ತಿಗಳ ವಿಭಾಗದ ವಿಜೇತರು
 
ಅತ್ಯುತ್ತಮ ಚಿತ್ರ
ಆರ್‌ಆರ್‌ಆರ್‌
 
ಅತ್ಯುತ್ತಮ ನಿರ್ದೇಶಕ
ಎಸ್‌. ಎಸ್‌. ರಾಜಮೌಳಿ (ಆರ್‌ಆರ್‌ಆರ್‌)
 
ಅತ್ಯುತ್ತಮ ಚಲನಚಿತ್ರ (ವಿಮರ್ಶಕರು)
ಸೀತಾ ರಾಮಂ (ಹನು ರಾಘವಪುಡಿ)
 
ಲೀಡಿಂಗ್‌ ರೋಲ್‌ ಅತ್ಯುತ್ತಮ ನಟ (ಪುರುಷ)
ಜೂನಿಯರ್‌ ಎನ್.ಟಿ.ಆರ್ (ಆರ್‌ಆರ್‌ಆರ್‌)
ರಾಮ್ ಚರಣ್ (ಆರ್‌ಆರ್‌ಆರ್‌)
 
ಅತ್ಯುತ್ತಮ ನಟ (ವಿಮರ್ಶಕರು)
ದುಲ್ಕರ್ ಸಲ್ಮಾನ್ (ಸೀತಾ ರಾಮಂ)
 
ಲೀಡಿಂಗ್‌ ರೋಲ್‌ ಅತ್ಯುತ್ತಮ ನಟಿ (ಮಹಿಳೆ)
ಮೃಣಾಲ್ ಠಾಕೂರ್ (ಸೀತಾ ರಾಮಂ)
 
ಅತ್ಯುತ್ತಮ ನಟಿ (ವಿಮರ್ಶಕರು)
ಸಾಯಿ ಪಲ್ಲವಿ (ವಿರಾಟ ಪರ್ವಂ)
 
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ)
ರಾಣಾ ದಗ್ಗುಬಾಟಿ (ಭೀಮ ನಾಯಕ್)
 
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ)
ನಂದಿತಾ ದಾಸ್ (ವಿರಾಟ ಪರ್ವಂ)
 
ಅತ್ಯುತ್ತಮ ಸಂಗೀತ ಆಲ್ಬಮ್
ಎಂ. ಎಂ. ಕೀರವಾಣಿ (ಆರ್‌ಆರ್‌ಆರ್‌)
 
ಅತ್ಯುತ್ತಮ ಸಾಹಿತ್ಯ
ಸಿರಿವೆಣ್ಣೆಲ ಸೀತಾರಾಮ ಶಾಸ್ತ್ರಿ- ಕಾನುಣ್ಣ ಕಲ್ಯಾಣಂ (ಸೀತಾ ರಾಮಂ)
 
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ)
ಕಾಲ ಭೈರವ- ಕೊಮುರಂ ಭೀಮುದೋ (ಆರ್‌ಆರ್‌ಆರ್‌)
 
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ)
ಚಿನ್ಮಯಿ ಶ್ರೀಪಾದ (ಓಹ್ ಪ್ರೇಮ- ಸೀತಾ ರಾಮಂ)
 
ತಮಿಳು ಪ್ರಶಸ್ತಿಗಳ ವಿಭಾಗದ ವಿಜೇತರು
 
ಅತ್ಯುತ್ತಮ ಚಿತ್ರ
ಪೊನ್ನಿಯಿನ್ ಸೆಲ್ವನ್ ಭಾಗ 1
 
ಅತ್ಯುತ್ತಮ ನಿರ್ದೇಶಕ
ಮಣಿ ರತ್ನಂ (ಪೊನ್ನಿಯಿನ್ ಸೆಲ್ವನ್ ಭಾಗ 1)
 
ಅತ್ಯುತ್ತಮ ಚಲನಚಿತ್ರ (ವಿಮರ್ಶಕರು)
ಕಡೈಸಿ ವಿವಸಾಯಿ (ಮಣಿಕಂದನ್)
 
ಲೀಡಿಂಗ್‌ ರೋಲ್‌ ಅತ್ಯುತ್ತಮ ನಟ (ಪುರುಷ)
ಕಮಲ್ ಹಾಸನ್ (ವಿಕ್ರಮ್)
 
ಲೀಡಿಂಗ್‌ ರೋಲ್‌ ಅತ್ಯುತ್ತಮ ನಟಿ (ಮಹಿಳೆ)
ಸಾಯಿ ಪಲ್ಲವಿ (ಗಾರ್ಗಿ)
 
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ)
ಕಾಳಿ ವೆಂಕಟ್ (ಗಾರ್ಗಿ)
 
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ)
ಊರ್ವಶಿ (ವೀಟ್ಲ ವಿಶೇಷಂ)
 
ಅತ್ಯುತ್ತಮ ನಟ (ವಿಮರ್ಶಕರು)
ಧನುಷ್ (ತಿರುಚಿತ್ರಾಂಬಲಂ)
ಆರ್. ಮಾಧವನ್ (ರಾಕೆಟ್ರಿ: ದಿ ನಂಬಿ ಎಫೆಕ್ಟ್)
 
ಅತ್ಯುತ್ತಮ ನಟಿ (ವಿಮರ್ಶಕರು)
ನಿತ್ಯಾ ಮೆನೆನ್ (ತಿರುಚಿತ್ರಾಂಬಲಂ)
 
ಅತ್ಯುತ್ತಮ ಸಂಗೀತ ಆಲ್ಬಮ್
ಎ.ಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್ ಭಾಗ 1)
 
ಅತ್ಯುತ್ತಮ ಸಾಹಿತ್ಯ
ತಾಮರೈ (ಮರಕ್ಕುಮ ನೆಂಜಂ- ವೆಂದು ತನಿಂಧತ್ತು ಕಾಡು)
 
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ)
ಸಂತೋಷ್ ನಾರಾಯಣನ್ (ತೆನ್ಮೋಳಿ- ತಿರುಚಿತ್ರಾಂಬಲಂ)
 
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ)
ಅಂತರ ನಂದಿ (ಅಲೈಕದಲ್- ಪೊನ್ನಿಯಿನ್ ಸೆಲ್ವನ್ ಭಾಗ 1)
 
ಮಲಯಾಳಂ ಪ್ರಶಸ್ತಿಗಳ ವಿಭಾಗದ ವಿಜೇತರು
 
ಅತ್ಯುತ್ತಮ ಚಿತ್ರ
ಎನ್ನ ತಾನ್ ಕೇಸ್ ಕೊಡು
 
ಅತ್ಯುತ್ತಮ ನಿರ್ದೇಶಕ
ರತೀಶ್ ಬಾಲಕೃಷ್ಣನ್ ಪೊಡುವಾಳ್ (ಎನ್ನ ತಾನ್ ಕೇಸ್ ಕೊಡು)
 
ಅತ್ಯುತ್ತಮ ಚಲನಚಿತ್ರ (ವಿಮರ್ಶಕರು)
ಅರಿಯಿಪ್ಪು (ಮಹೇಶ್ ನಾರಾಯಣನ್)
 
ಲೀಡಿಂಗ್‌ ರೋಲ್‌ ಅತ್ಯುತ್ತಮ ನಟ (ಪುರುಷ)
ಕುಂಚಕೋ ಬೋಬನ್ (ಎನ್ನ ತಾನ್ ಕೇಸ್ ಕೊಡು)
 
ಅತ್ಯುತ್ತಮ ನಟ (ವಿಮರ್ಶಕರು)
ಅಲೆನ್ಸಿಯರ್ ಲೇ ಲೋಪೆಜ್ (ಅಪ್ಪನ್‌)
 
ಲೀಡಿಂಗ್‌ ರೋಲ್‌ ಅತ್ಯುತ್ತಮ ನಟಿ (ಮಹಿಳೆ)
ದರ್ಶನಾ ರಾಜೇಂದ್ರನ್ (ಜಯ ಜಯ ಜಯ ಜಯ ಹೇ)
 
ಅತ್ಯುತ್ತಮ ನಟಿ (ವಿಮರ್ಶಕರು)
ರೇವತಿ (ಭೂತಕಾಲಂ)
 
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ)
ಇಂದ್ರನ್ಸ್ (ಉಡಾಲ್)
 
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ)
ಪಾರ್ವತಿ ತಿರುವೋತ್ತು (ಪುಝು)
 
ಅತ್ಯುತ್ತಮ ಸಂಗೀತ ಆಲ್ಬಮ್
ಕೈಲಾಸ್ ಮೆನನ್ (ವಾಶಿ)
 
ಅತ್ಯುತ್ತಮ ಸಾಹಿತ್ಯ
ಅರುಣ್ ಅಲತ್ (ದರ್ಶನ-ಹೃದಯಂ)
 
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ)
ಉನ್ನಿ ಮೆನನ್ (ರತಿಪುಷ್ಪಂ-ಭೀಷ್ಮ ಪರ್ವಂ)
 
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ)
ಮೃದುಲಾ ವೇರಿಯರ್ (ಮಾಯಿಲ್ಪೀಲಿ- ಪಾಥೋನ್ಪಥಂ ನೂಟ್ಟಂಡು)
 
ತಾಂತ್ರಿಕ ಪ್ರಶಸ್ತಿಗಳ ವರ್ಗದ ವಿಜೇತರು
 
ಅತ್ಯುತ್ತಮ ಪದಾರ್ಪಣೆ  (ಮಹಿಳೆ)
ಅದಿತಿ ಶಂಕರ್ (ವಿರುಮನ್)
 
ಅತ್ಯುತ್ತಮ ಪದಾರ್ಪಣೆ (ಪುರುಷ)
ಪ್ರದೀಪ್ ರಂಗನಾಥನ್ (ಲವ್ ಟುಡೇ)
 
ಅತ್ಯುತ್ತಮ ನೃತ್ಯ ಸಂಯೋಜನೆ
ಪ್ರೇಮ್ ರಕ್ಷಿತ್ (ನಾಟು ನಾಟು-ಆರ್‌ಆರ್‌ಆರ್‌)
 
ಅತ್ಯುತ್ತಮ ಸಿನಿಮಾಟೋಗ್ರಫಿ
ಕೆ. ಕೆ. ಸೆಂಥಿಲ್ ಕುಮಾರ್ (ಆರ್‌ಆರ್‌ಆರ್‌)
ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್ ಭಾಗ 1)
 
ಅತ್ಯುತ್ತಮ ಪ್ರೊಡಕ್ಷನ್‌ ವಿನ್ಯಾಸ
ಸಾಬು ಸಿರಿಲ್ (ಆರ್‌ಆರ್‌ಆರ್‌)
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ