ಚಾರ್ಲಿ ಸಿನಿಮಾ ಪ್ರೇರಣೆಯಿಂದ ಬೀದಿ ನಾಯಿಗಳ ದತ್ತು ಅಭಿಯಾನ ಶುರು
ಶ್ವಾನ ಪ್ರಿಯರಿಗೆ ಇಷ್ಟವಾಗುವ ಕತೆ ಹೊಂದಿರುವ ಚಾರ್ಲಿ ಸಿನಿಮಾದಿಂದ ಪ್ರೇರಣೆಯಾಗಿ ಈಗ ಬೀದಿ ನಾಯಿಗಳ ದತ್ತು ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ.
ಸ್ವತಃ ಚಾರ್ಲಿ ಸಿನಿಮಾ ತಂಡ ಎನ್ ಜಿಒ ಸಹಯೋಗದೊಂದಿಗೆ ಬೀದಿ ನಾಯಿಗಳ ದತ್ತು ಸ್ವೀಕಾರ ಅಭಿಯಾನಕ್ಕೆ ಚಾಲನೆ ನೀಡಿತ್ತು. ಸಿನಿಮಾ ವೀಕ್ಷಿಸಿದ ಪ್ರೇಕ್ಷಕರಲ್ಲಿ ಕೆಲವರಿಗಾದರೂ ಬೀದಿ ನಾಯಿಗಳ ಬಗ್ಗೆ ಇರುವ ದೃಷ್ಟಿಕೋನವೇ ಬದಲಾಗಿದೆ ಎನ್ನಬಹುದು.