777 ಚಾರ್ಲಿ ಪ್ರಿ ಬುಕಿಂಗ್ ಗೆ ಭರ್ಜರಿ ರೆಸ್ಪಾನ್ಸ್: ರಿಲೀಸ್ ಗೂ ಮುನ್ನವೇ ಚಾರ್ಲಿ ಕ್ರೇಜ್
ಬ್ರೇಕ್ ಗಾಗಿ ಕಾಯುತ್ತಿರುವ ರಕ್ಷಿತ್ ಗೆ ಈ ಸಿನಿಮಾ ಯಶಸ್ಸು ತಂದುಕೊಡುವುದರಲ್ಲಿ ಅನುಮಾನವೇ ಇಲ್ಲ. ಜೂನ್ 10 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿರುವ ಚಾರ್ಲಿ 777 ಸಿನಿಮಾದ ಪ್ರಿ ಬುಕಿಂಗ್ ಆನ್ ಲೈನ್ ನಲ್ಲಿ ಶುರುವಾಗಿದೆ.
ಇದಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಸೀಟುಗಳು ಕೆಲವೇ ಕ್ಷಣಗಳಲ್ಲಿ ಭರ್ತಿಯಾಗುತ್ತಿವೆ. ಈ ಸಿನಿಮಾಗಿರುವ ಕ್ರೇಜ್ ನೋಡಿ ರಕ್ಷಿತ್ ಮತ್ತು ಟೀಂ ಖುಷಿಯಾಗಿದೆ. ಹೀಗಾಗಿ ಸಿನಿಮಾ ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ ಎನ್ನಬಹುದು.