ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾಗೆ ಇಂದು ಮುಹೂರ್ತ
ಇಂದು ನಗರದ ಬಂಡೆಮಾಕಾಳಮ್ಮ ದೇವಾಲಯದಲ್ಲಿ ಬೆಳಿಗ್ಗೆ 9.15 ಕ್ಕೆ ಹೊಸ ಸಿನಿಮಾಗೆ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಚಿತ್ರತಂಡವೇ ಅಲ್ಲಿ ಹಾಜರಿರಲಿದೆ.
ಉಪೇಂದ್ರ ನಿರ್ದೇಶನದ ಸಿನಿಮಾ ಎಂದರೆ ತಲೆಗೆ ಹುಳ ಬಿಟ್ಟುಕೊಂಡಂತೇ. ಜನರಲ್ಲೂ ಕುತೂಹಲ ಜಾಸ್ತಿ. ಈ ಸಿನಿಮಾದ ಪೋಸ್ಟರ್ ಒಂದು ಈಗಾಗಲೇ ಬಿಡುಗಡೆಯಾಗಿತ್ತು. ಇದೀಗ ಹೆಚ್ಚಿನ ಮಾಹಿತಿ ಇಂದಿನ ಮುಹೂರ್ತ ಕಾರ್ಯಕ್ರಮದ ಬಳಿಕ ತಿಳಿದುಬರಲಿದೆ.