ಲಿಂಗಾ ಚಿತ್ರದಲ್ಲಿ 9 ನಿಮಿಷಗಳ ದೃಶ್ಯ ಕಟ್ ಕಟ್...!

ಬುಧವಾರ, 17 ಡಿಸೆಂಬರ್ 2014 (10:38 IST)
ಪರಕಾಸ್ I have not failed" I have just postpone my success..ಎನ್ನುವ ಡೈಲಾಗ್ ಗಳಿಂದ ಜನಮನ ಗೆದ್ದಿರುವ ಚಿತ್ರ ಲಿಂಗಾ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿನಯದ ಲಿಂಗಾ ಚಿತ್ರ ಕಳೆದ ವಾರ ಬಿಡುಗಡೆ ಆಯಿತು. ಈ ಚಿತ್ರವು ಎಗ್ಗಿಲ್ಲದೆ ಸಿಕ್ಕಾಪಟ್ಟೆ ಹಣದ ಗಳಿಕೆ ಮಾಡುತ್ತಿದೆ. ವಿಶ್ವವಿಡೀ 2500 ತೆರೆಗಳ ಮೇಲೆ ಬಿಡುಗಡೆ ಆಗಿರುವ ಈ ಚಿತ್ರದ ಹಣಗಳಿಕೆ ಮುಂದಿನ ವಾರದಲ್ಲಿ ತನ್ನ ವೇಗ ಕಡಿಮೆ ಮಾಡಿಕೊಳ್ಳುತ್ತದೆ ಎಂದು ವಿಮರ್ಶಕರು ಭವಿಷ್ಯವಾಣಿ ನುಡಿದಿದ್ದಾರೆ. 
ವಿಮರ್ಶಕರು ಏನೇ ಹೇಳಲಿ ನಾಲ್ಕು ವರ್ಷದ ನಂತರ ಪೂರ್ಣ ಪ್ರಮಾಣದ ರಜನಿಕಾಂತ್ ಅವರನ್ನು ಕಾಣಲು ಅಭಿಮಾನಿಗಳು ಥಿಯೇಟರ್ ಗೆ ನುಗ್ಗುತ್ತಿದ್ದಾರೆ. ದೇಶವಿದೇಶಗಳಲ್ಲಿ ಸಹಿತ ಅತ್ಯುತ್ತಮ ಗಳಿಕೆ ಆಗುತ್ತಿದೆ. ಒಂದು ವಾರದ ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ ಅಭಿಮಾನಿಗಳು. ಈ ಚಿತ್ರದಲ್ಲಿ ರಜನಿ ಮುಖ್ಯ ಆಕರ್ಷಣೆ ಆದ ಕಾರಣ ಅಭಿಮಾನಿಗಳು ತಂಡೋಪ ತಂಡವಾಗಿ  ಬರುತ್ತಿದ್ದಾರೆ. ಈ ಮಧ್ಯೆ ಲಿಂಗಾ ಚಿತ್ರದಲ್ಲಿ ಸುಮಾರು ಒಂಭತ್ತು ನಿಮಿಷಗಳ ಕಾಲದ ದೃಶ್ಯ ಪ್ರಸಾರಕ್ಕೆ ಕತ್ತರಿ ಹಾಕಲಾಗಿದೆ. ಅಂದರೆ ಮೊದಲರ್ಧದಲ್ಲಿ ಆರು ನಿಮಿಷಗಳ ಹಾಡು, ದ್ವೀತಿಯಾರ್ಧದ ಮೂರು ನಿಮಿಷಗಳ ದೃಶ್ಯಗಳಿಗೆ ಕತ್ತರಿ ಬಿದ್ದಿದೆ.  

ವೆಬ್ದುನಿಯಾವನ್ನು ಓದಿ