ಭಾರತಿ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ಕೊಡಲಿದ್ದಾರೆ ಅಳಿಯ ಅನಿರುದ್ಧ್

ಭಾನುವಾರ, 15 ಆಗಸ್ಟ್ 2021 (09:53 IST)
ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನಕ್ಕೆ ಅವರ ಅಳಿಯ, ನಟ ಅನಿರುದ್ಧ್ ವಿಶೇಷ ಉಡುಗೊರೆಯೊಂದನ್ನು ನೀಡಲಿದ್ದಾರೆ.


ಎಲ್ಲರಿಗೂ ತಿಳಿದಿರುವ ಹಾಗೆ ಅನಿರುದ್ಧ್ ಈಗಾಗಲೇ ಭಾರತಿ ವಿಷ್ಣುವರ್ಧನ್ ಕುರಿತಾದ ಸಾಕ್ಷ್ಯ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಕೀರ್ತಿ ವಿಷ್ಣುವರ್ಧನ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಾಕ್ಷ್ಯ ಚಿತ್ರವನ್ನು ನಿರ್ದೇಶಿಸಿರುವುದು ಅನಿರುದ್ಧ್.

 ಈ ಸಾಕ್ಷ್ಯ ಚಿತ್ರದ ಟೀಸರ್ ಇಂದು ಮಧ‍್ಯಾಹ್ನ ಬಿಡುಗಡೆಯಾಗಲಿದೆ ಎಂದು ಅನಿರುದ್ಧ್ ಹೇಳಿದ್ದಾರೆ. ಇದೇ ತಿಂಗಳು ಈ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶ ಅವರಿಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ