ಖ್ಯಾತ ಫುಡ್‌ ಬ್ಲಾಗರ್‌ ಮಗ ರಸ್ತೆ ಅಪಘಾತದಲ್ಲಿ ನಿಧನ

Sampriya

ಬುಧವಾರ, 19 ಫೆಬ್ರವರಿ 2025 (15:04 IST)
Photo Courtesy X
ಖ್ಯಾತ ಯೂಟ್ಯೂಬರ್‌ 'ಚಟೋರಿ ರಜನಿ' ಎಂದು ಜನಪ್ರಿಯವಾಗಿರುವ ರಜನಿ ಜೈನ್ ಅವರ ಮಗ ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಫುಡ್ ಬ್ಲಾಕ್ ಮೂಲಕ ರಜನಿ ಜೈನ್ ಅವರು ಜನಪ್ರಿಯರಾಗಿದ್ದಾರೆ.

"ನಮ್ಮ ಪ್ರೀತಿಯ ರತ್ನ ತರಣ್ ಜೈನ್ ಅವರು ರಸ್ತೆ ಅಪಘಾತದಲ್ಲಿ ನಿಧನರಾದರು ಎಂಬ ಅಸಹನೀಯ ಸುದ್ದಿಯನ್ನು ನಾವು ಛಿದ್ರಗೊಂಡ ಹೃದಯದಿಂದ ಹಂಚಿಕೊಳ್ಳುತ್ತೇವೆ" ಎಂದು ರಜನಿ ಜೈನ್ ಮತ್ತು ಅವರ ಪತಿ ಸಂಗೀತ್ ಜೈನ್ ಚಟೋರಿ ರಜನಿ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ತರಣ್ ಜೈನ್ ಅವರ ನಿಧನದ ಕುರಿತು ಮತ್ತೊಂದು ಪೋಸ್ಟ್‌ನಲ್ಲಿ ಶೋಕ ಸಭೆಯು ಫೆಬ್ರವರಿ 19 ರ ಬುಧವಾರ ದೆಹಲಿಯ ಛತ್ತರ್‌ಪುರದ ತೇರಾಪಂಥ್ ಭವನದಲ್ಲಿ ನಡೆಯಲಿದೆ ಎಂದು ಹೇಳಿದೆ.

ರಜನಿ ಜೈನ್ ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ Instagram ಮತ್ತು ಯೂಟ್ಯೂಬ್‌ನಲ್ಲಿ ತನ್ನ ಅನನ್ಯ ಮತ್ತು ಸೀದಾ ಅಡುಗೆ ವಿಷಯದೊಂದಿಗೆ ಖ್ಯಾತಿ ಗಳಿಸಿದ್ದಾರೆ.  ಚಟೋರಿ ರಜನಿ ಅವರ ಪೋಸ್ಟ್‌ಗಳಲ್ಲಿ, ಅವರ ಪತಿಯ ಊಟದ ಪೆಟ್ಟಿಗೆಯನ್ನು ಒಳಗೊಂಡಿರುವ ವೀಡಿಯೊಗಳು ಹೆಚ್ಚು ಗಮನ ಸೆಳೆದವು ಮತ್ತು ವ್ಯಾಪಕವಾಗಿ ಜನಪ್ರಿಯವಾಗಿವೆ.

‘ಆಜ್ ಮೇರೆ ಪತಿ ಕೆ ಲಂಚ್ ಬಾಕ್ಸ್ ಮೆ ಕ್ಯಾ ಹೈ [ನನ್ನ ಗಂಡನ ಊಟದಲ್ಲಿ ಏನಿದೆ’ ಎಂದು ಪ್ರಾರಂಭವಾಗುವ ಚಟೋರಿ ರಜನಿಯ ವೀಡಿಯೊಗಳು ಸ್ವತಃ ಸರಣಿಯಾಗಿ ಮಾರ್ಪಟ್ಟಿವೆ.

ಆಕೆಯ ಮಗ, ತರಣ್ ಜೈನ್ ಕೂಡಾ ಆಗಾಗ ಕೆಲವೊಂದು ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ.  ತರಣ್ ಜೈನ್ ಕೊನೆಯದಾಗಿ ಫೆಬ್ರವರಿ 5 ರಂದು ಚಟೋರಿ ರಜನಿಯಲ್ಲಿ ರೀಲ್‌ನಲ್ಲಿ ಕಾಣಿಸಿಕೊಂಡರು.

ಇನ್‌ಸ್ಟಾಗ್ರಾಮ್ ಹ್ಯಾಂಡಲ್ 'ಚಟೋರಿ ರಜನಿ' ಆರು ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದರೆ, ಯೂಟ್ಯೂಬ್ ಹ್ಯಾಂಡಲ್ 3,70,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ