ಮೊದಲ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ

Sampriya

ಭಾನುವಾರ, 19 ಅಕ್ಟೋಬರ್ 2025 (18:29 IST)
ಬೆಂಗಳೂರು: ಕನ್ನಡ ಬಿಗ್‌ಬಾಸ್‌ ಸೀಸನ್ 12ರಲ್ಲಿ ದಿನದಿಂದ ದಿನಕ್ಕೆ ಟ್ವಿಸ್ಟ್‌ಗಳು ಸಿಗುತ್ತಿದ್ದು, ಇದೀಗ ಮೊದಲ ಗ್ರ್ಯಾಂಡ್ ಫಿನಾಲೆ ನಡೆದಿದೆ. ಸುದೀಪ್ ಅವರು ಈ ಹಿಂದಿನ ವೀಕೆಂಡ್ ಎಪಿಸೋಡ್‌ನಲ್ಲಿ ಅರ್ಧದಷ್ಟು ಸ್ಪರ್ಧಿಗಳು ರೀ ಪ್ಲೇಸ್ ಆಗುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಅದರಂತೆ ಒಂದೇ ವಾರದಲ್ಲಿ ದೊಡ್ಮನೆಯಿಂದ ಮೂವರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಇನ್ನೂ ಸರ್ಪ್ರೈಸ್ ಆಗಿ ಗ್ರ್ಯಾಂಡ್‌ ಫಿನಾಲೆ ವಾರದಲ್ಲಿ ಮೂವರು ಸ್ಪರ್ಧಿಗಳು ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದಿದ್ದಾರೆ. ಇದಕ್ಕೂ ಮುನ್ನ ಸ್ಪರ್ಧಿಗಳಾದ ಮಂಜು ಭಾಷಿಣಿ ಮತ್ತು ಅಶ್ವಿನಿ ಎಸ್‌.ಎನ್‌ ಅವರು ಮನೆಯಿಂದ ಹೊರಬಿದ್ದಿದ್ದಾರೆ.

ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಒಬ್ಬ ಮಹಿಳೆ ಮತ್ತು ಇಬ್ಬರು ಪುರುಷರು ಮನೆ ಪ್ರವೇಶ ಮಾಡಿರುವುದನ್ನು ತೋರಿಸಲಾಗಿದೆ. ಆದರೆ, ಆ ಸ್ಪರ್ಧಿಗಳು ಯಾರೆಂಬುದನ್ನು ಇನ್ನೂ ರಟ್ಟು ಮಾಡಿಲ್ಲ.

ಮೂವರು ಸ್ಪರ್ಧಿಗಳನ್ನು ನಟ, ನಿರೂಪಕ ಸುದೀಪ್‌ ಅವರು ಸ್ವಾಗತಿಸಿದ್ದಾರೆ. ಮನೆಯಲ್ಲಿದ್ದವರಿಗೆ ಅತ್ಯುತ್ತಮ ಸ್ಪರ್ಧೆ ಕೊಡುವುದಾಗಿ ಅವರು ತಿಳಿಸಿದ್ದಾರೆ.

ಸ್ಪರ್ಧಿಗಳ ಬಗ್ಗೆ ಹೇಳಿಕೊಳ್ಳದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಹೆಸರು ಹರಿದಾಡುತ್ತಿದೆ. ಅದರಲ್ಲಿ ‘ಕ್ರೇಜಿ ಕೀರ್ತಿ’, 'ಆಸ್ಟಿನ್‌ನ ಮಹಾನ್‌ ಮೌನ’ ಚಿತ್ರದ ನಟಿ ರಿಷಾ ಗೌಡ, ಫಿಟ್ನೆಸ್ ಮಾಡೆಲ್, ಬಾಡಿ ಬಿಲ್ಡರ್ ಸೂರಜ್ ಸಿಂಗ್ ಮತ್ತು ‘ಕ್ವಾಟ್ಲೆ ಕಿಚನ್‌’ ವಿನ್ನರ್ ಖ್ಯಾತಿಯ ರಾಘು ಅವರು ಮನೆಗೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ. 

ಮೊದಲ ಫಿನಾಲೆಯಲ್ಲಿ ಫೈನಲಿಸ್ಟ್‌ಗಳಾಗಿದ್ದ ನಾಲ್ವರಲ್ಲಿ ಕಾಕ್ರೋಚ್ ಸುಧಿ ಅವರನ್ನು ವಿಜೇತರೆಂದು ಸುದೀಪ್‌ ಘೋಷಿಸಿದ್ದಾರೆ. ಆ ಮೂಲಕ ಸುಧಿ ಅವರು ಮನೆಯಲ್ಲಿ ವಿಶೇಷ ಅಧಿಕಾರವನ್ನು ಪಡೆದುಕೊಂಡಿದ್ದಾರೆ.

ಬಿಗ್‌ಬಾಸ್ ಆರಂಭವಾಗಿ ಮೂರು ವಾರಗಳಲ್ಲಿ ಒಟ್ಟು ಐದು ಸ್ಪರ್ಧಿಗಳು ಎಲಿಮಿನೆಟ್‌ ಆಗಿದ್ದಾರೆ. ಮೊದಲ ವಾರ ಕರಿಬಸಪ್ಪ ಹುಳಿಯಾರ್, ಅಮಿತ್ ಪವಾರ್ ಅವರು ಮನೆಯಿಂದ ಹೊರ ನಡೆದಿದ್ದರು. ಮಿಡ್‌ ವೀಕ್‌ ಎಲಿಮಿನೇಶನ್‌ನಲ್ಲಿ ಡಾಗ್ ಸತೀಶ್‌ ಅವರು, ಮೊದಲ ಗ್ರ್ಯಾಂಡ್‌ ಫಿನಾಲೆ ವಾರದಲ್ಲಿ ಮಂಜು ಭಾಷಿಣಿ ಮತ್ತು ಅಶ್ವಿನಿ ಎಸ್‌.ಎನ್‌ ಅವರು ಎಲಿಮಿನೇಟ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ