ನೆಚ್ಚಿನ ನಟ ವರುಣ್ ತೇಜನನ್ನು ನೋಡಲು 200ಕೀ.ಮೀ ದೂರ ಕಾಲ್ನಡಿಗೆಯಲ್ಲಿ ಬಂದ ಅಭಿಮಾನಿ
ಸೋಮವಾರ, 1 ಫೆಬ್ರವರಿ 2021 (09:55 IST)
ಹೈದರಾಬಾದ್ : ವರುಣ್ ತೇಜ್ ತೆಲುಗಿನ ಖ್ಯಾತ ನಟರಲ್ಲಿ ಒಬ್ಬರು. ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಅವರ ಅಭಿಮಾನಿಯೊಬ್ಬರು ಅವರನ್ನು ನೋಡಲು 200ಕೀ.ಮೀ ನಿಂದ ಕಾಲ್ನಡಿಗೆಯಲ್ಲಿ ಬಂದಿದ್ದಾರೆ.
ವರುಣ್ ತೇಜ್ ಅಭಿಮಾನಿ ಬಾಲು ಎನ್ನುವವರು ನಿಜಾಮಾಬಾದ್ ಜಿಲ್ಲೆಯ ಬಿಕಾನೆರ್ ನಿಂದ ಹೈದರಾಬಾದ್ ಗೆ ಪಾದಯಾತ್ರೆಯ ಮೂಲಕ ಬಂದು ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಿದ್ದಾರೆ.
ನಟ ವರುಣ್ ತಮ್ಮ ಅಭಿಮಾನಿಯನ್ನು ಆದರದಿಂದ ಸ್ವಾಗತಿಸಿ, ಕುಳಿತು ಮಾತನಾಡಿಸಿ ಆತನ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಇಂತಹ ಸಾಹಸಗಳನ್ನು ಮತ್ತೆ ಮಾಡಬಾರದು ಎಂದು ತಿಳಿ ಹೇಳಿದ್ದಾರೆ.