ಮಲ್ಲಮ್ಮ ಅಭಿಮಾನಿಗಳಿಂದ ಬಿಗ್‌ಬಾಸ್ ಆಯೋಜಕರಿಗೆ ವಿಶೇಷ ಮನವಿ

Sampriya

ಮಂಗಳವಾರ, 30 ಸೆಪ್ಟಂಬರ್ 2025 (15:51 IST)
Photo Credit X
ಬೆಂಗಳೂರು: ಬಿಗ್‌ಬಾಸ್ ಸೀಸನ್ 12 ಆರಂಭಗೊಂಡ ಕ್ಷಣದಿಂದ ಭಾರೀ ಕುತೂಹಲವನ್ನು ಮೂಡಿಸುತ್ತಲೇ ಇದೆ. ಇನ್ನೂ ಈ ಭಾರೀ ಊಹೆಗೂ ಮೀರಿದ ಸ್ಪರ್ಧಿಗಳೇ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಅದರಲ್ಲಿ ಮಲ್ಲಮ್ಮ ಒಬ್ಬರು. ಈ ಬಾರಿಯ ಬಿಗ್‌ಬಾಸ್‌ನಲ್ಲಿ ಹಿರಿಯರಾಗಿರುವ ಮಲ್ಲಮ್ಮ ಅವರು ಹಳ್ಳಿಯಿಂದ ಬಂದ ಮುಗ್ದತೆಯ ವ್ಯಕ್ತಿ. ಇದಕ್ಕೆ ನಿನ್ನೆ ಎಪಿಸೋಡ್‌ನಲ್ಲಿ ನಡೆದ ಘಟನೆ. 

ಒಂಟಿ ಸ್ಪರ್ಧಿಗಳಿಗೆ ಮನೆ ಮಂದಿಗೆ ಆಯ್ಕೆ ಮಾಡುವ ದಿನಸಿ ಟಾಸ್ಕ್‌ ನೀಡಲಾಯಿತು. ಈ ವೇಳೆ ಮಲ್ಲಮ್ಮ ಬಿಗ್‌ಬಾಸ್‌ ಮಾತಿಗೆ ಗೊಂದಲಕ್ಕೀಡಾದರು. ಬಿಗ್‌ಬಾಸ್‌ನ ಮಾತನ್ನು ಅರ್ಥ ಮಾಡಿಕೊಳ್ಳಲಾಗದೆ ಮಲ್ಲಮ್ಮ ಅವರು ಟಾಸ್ಕ್‌ನಿಂದ ಹೊರಬರಬೇಕಾಯಿತು. 

ಇದೀಗ ಬಿಗ್‌ಬಾಸ್ ಆಯೋಜಕರಲ್ಲಿ ಮಲ್ಲಮ್ಮ ಅವರ ಅಭಿಮಾನಿಗಳು ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. 

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಮನವಿ ಮಾಡಿದ್ದಾರೆ.  ಮಲ್ಲಮ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತಾಡಿ. ನಿಮ್ಮ Sanskritised ಕನ್ನಡ ಅವರಿಗೆ ಅರ್ಥ ಆಗ್ತಾ ಇಲ್ಲ. 

ಅವರೊಂದಿಗೆ ಅವರಿಗೆ ಅರ್ಥ ಆಗುವ ರೀತಿ ಉತ್ತರ ಕರ್ನಾಟಕದ ಕನ್ನಡ ಭಾಷೆ ಬಳಸಿ. ಇಲ್ವಾ ಅಲ್ಲಿ ಇರೋರಿಗೆ ಯಾರ ಬಳಿಯಾದರೂ ಅವ್ರಿಗೆ ಅರ್ಥ ಮಾಡಿಸುವ ಜವಾಬ್ದಾರಿ ಕೊಡಿ. 

ಸುಮ್ನೆ ಅವರನ್ನು ಕರೆಸಿ ಹೀಗೆಲ್ಲ ಮಾಡಬೇಡಿ ಎಂದು ಎಂದು ಕಿಚ್ಚ ಸುದೀಪ್ ಅವರನ್ನು ಕೇಳಿಕೊಂಡಿದ್ದಾರೆ.                               

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ