ಆಗಡು ವಿವಾದವನ್ನು ಪುನಃ ಜೀವಂತಗೊಳಿಸಿದ ಪ್ರಕಾಶ್ ರಾಜ್..

ಸೋಮವಾರ, 6 ಅಕ್ಟೋಬರ್ 2014 (12:52 IST)
ಸಾಕಷ್ಟು ಸುದ್ದಿ ಮತ್ತು ಬಹಳಷ್ಟು ನಿರೀಕ್ಷೆಗಳನ್ನು ನೀಡಿದ್ದ ಚಿತ್ರ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಅಭಿನಯದ ಆಗಡು. ಆದರೆ ಅದು ಹೇಳ ಹೆಸರಿಲ್ಲದೆ ಮಕಾಡೆ ಮಲಗಿ ಬಿಟ್ಟಿತು. ಘೋರವಾಗಿ ಸೋತು ನೆಲ ಕಚ್ಚಿದ ಚಿತ್ರದ ನಿರ್ದೇಶನ ಮಾಡಿದ್ದು ಶ್ರೀನು ವೈಟ್ಲ. 
 
ಆದರೆ ಈಗ ಆ ಚಿತ್ರ ಮತ್ತೊಮ್ಮೆ ಸುದ್ದಿಯಲ್ಲಿದೆ. ಮುಖ್ಯವಾಗಿ ಆ ಚಿತ್ರದಲ್ಲಿ ಪ್ರಕಾಶ್ ರಾಜ್ ಅವರನ್ನು ಕಿತ್ತು ಹಾಕಲಾಗಿತ್ತು. ಈ ಚಿತ್ರದ ಬಿಡುಗಡೆಗೆ  ಮುನ್ನ ಪ್ರಕಾಶ್ ಶ್ರೀನು  ವೈಟ್ಲ  ಅವರನ್ನು ಅಭಿನಂದಿಸಿ ತಾವು ಹಳೆಯ ವಿವಾದವನ್ನು ಮರೆತಿದ್ದೇವೆ ಎಂದು ಹೇಳಿದ್ದರಾದರೂ ಈಗ  ಸೋಲಿನಿಂದ ಕೆಂಗೆಟ್ಟಿರುವ ಶ್ರೀನು ಅವರ ಹಳೆಯ ವಿವಾದವನ್ನು ಮತ್ತೆ ಜೀವಂತ ಮಾಡಿದ್ದಾರೆ ಪ್ರಕಾಶ್ ರಾಜ್.
 
ಆಗಡು ಸಿನಿಮಾದ ಶೂಟಿಂಗ್ ಸಮಯದಲ್ಲಿ ಪ್ರಕಾಶ್ ರಾಜ್ ಬದಲಿಗೆ ಸೋನು ಸೂದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಅಂದಿನ ಶ್ರೀನು ಅವರ ರೀತಿಯನ್ನು ಖಂಡಿಸಿ ಆ ಬಗ್ಗೆ ಒಂದು ಮೀಟ್ ಕರೆದು ಶ್ರೀನು ವಿಧಾನದ ಬಗ್ಗೆ ಒಂದು ಕವಿತೆ ಬರೆದು ತಮ್ಮ ಅಸಹನೆ ತೋರಿದ್ದರು ಪ್ರಕಾಶ್ ಆ ಮುಖಾಂತರ ತಮ್ಮ ಕೋಪ ಹೊರ ಚೆಲ್ಲಿದ್ದರು. ವಿವಾದ ಮಂಡಳಿ ತನಕ ಹೋಗಿದ್ದು ಎಲ್ಲವು ಈಗ ಹಳೆಯ ಕಥೆ.  
 
ಆ ಚಿತ್ರ ಬಿಡುಗಡೆ ಆಗಿ ಅದು ಸೋತು ಹೈರಾಣಾಗಿದ್ದು ಆಯಿತು. ಆದರೆ ಆಗ ಆದ ಅಪಮಾನವನ್ನು ಪ್ರಕಾಶ್ ರಾಜ್ ಮರೆತಂತೆ ಇಲ್ಲ. ಅವರು ತಮ್ಮ ಅಸಹನೆಯನ್ನು ಹೊರ ಚೆಲ್ಲಿದ್ದಾರೆ. ತಾನು ಆ ಸಮಯದಲ್ಲಿ ಹೇಳಿದ ಮಾತುಗಳನ್ನು ವಿಲನ್ ಸಂಭಾಷಣೆಯಲ್ಲಿ ಸೇರಿಸಿದ್ದಾರೆ ಶ್ರೀನು , ಅದನ್ನು ತಾನು ಬಳಕೆ ಮಾಡುತ್ತೇನೆ ಎಂದು ಫೋನ್ ಮಾಡಿ  ಹೇಳಿದ್ದರೂ ಸಹಿತ ತನಗೆ ಬೇಸರ ಆಗುತ್ತಿರಲಿಲ್ಲ ಆದರೆ ಶ್ರೀನು ಆ ರೀತಿ ಮಾಡದೆ ತಮ್ಮ ಅಹಂಕಾರ ತೋರಿದ್ದಾರೆ ಎಂದು ಹೇಳಿದ್ದಾರೆ ಪ್ರಕಾಶ್. 
 
ತಾನು ನಿರ್ದೇಶಕ ಎಂದು ತಿಳಿಯುವುದು ಸಾಮಾನ್ಯ. ಆದರೆ ನಾನು ಮಾತ್ರ ನಿರ್ದೇಶಕ ಎಂದು ತಿಳಿದು ಕೊಳ್ಳುವುದು ಅತ್ಯಂತ ಅಂಹಕಾರಭರಿತ ವರ್ತನೆ ಎಂದು ಹೇಳಿದ್ದಾರೆ ಪ್ರಕಾಶ್ ರಾಜ್. ಮರೆತಿದ್ದರು ಎನ್ನಲಾದ ವಿವಾದ ಮತ್ತೆ ಜೀವಂತವಾಗಿದೆ, ಪ್ರಕಾಶ್ ರಾಜ್ ಹಳೆಯ ಸಂಗತಿಯನ್ನು ಪುನಃ ಬದುಕಿಸಿದ್ದಾರೆ.. ಅದರ ಅಂತ್ಯ ಹೇಗಿದೆಯೋ ವೇಟ್ ವೇಟ್ ಅಂಡ್ ವೇಟ್.

ವೆಬ್ದುನಿಯಾವನ್ನು ಓದಿ