ಆಮೀರ್ ಖಾನ್ ಐಶ್ವರ್ಯ ರೈ ಒಟ್ಟಿಗೆ ನಟಿಸ್ತಾ ಇದ್ದಾರಂತೆ..ಹೌದಂತೆ ?

ಸೋಮವಾರ, 17 ನವೆಂಬರ್ 2014 (12:36 IST)
ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ. ಕೇವಲ ಬಾಲಿವುಡ್ ಮಾತ್ರವಲ್ಲ ದಕ್ಷಿಣದಲ್ಲಿ ತಮಿಳು ಮತ್ತು ತೆಲುಗು ಭಾಷೆಗಳು, ಹಾಲಿವುಡ್ ಚಿತ್ರಗಳಲ್ಲೂ ಅಭಿನಯಿಸಿರುವ ನಟಿ ಐಶ್ವರ್ಯ ರೈ. ಮದುವೆ ಆದ ಬಳಿಕವು ಆಕೆಯ ಚಾರ್ಮ್ ಕಡಿಮೆ ಆಗಲೇ ಇಲ್ಲ. 
 
ಅದಾದ ಬಳಿಕ ಆಕೆ ಆರಾಧ್ಯ ಹುಟ್ಟಿದಳು. ತನ್ನ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡ ಐಶ್ ಆಗಾಗ ಜಾಹೀರಾತುಗಳಲ್ಲಿ ಕಾಣುತ್ತ ಆಕೆಯ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದರು. ಅದಾದ ಬಳಿಕ ಅಂದರೆ ಈಗ ಆಕೆ ಸಂಜಯ್ ಗುಪ್ತ ಅವರ ನಿರ್ದೇಶನ ಜಜ್ಬಾ ಚಿತ್ರದಲ್ಲಿ ನಟಿಸುವುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಅದಾದ ಬಳಿಕ ಬಾಲಿವುಡ್ ಸ್ಟಾರ್ ಮಿಸ್ಟರ್ ಪರ್ಫೆಕ್ಟ್  ಆಮೀರ್ ಖಾನ್ ಅವರ ಜೊತೆ ನಟಿಸುವ ಸಾಧ್ಯತೆಗಳು ಕೇಳಿ ಬರುತ್ತಿವೆ.  ಧರ್ಮ ಪ್ರೊಡಕ್ಷನ್ ನಲ್ಲಿ  ಕರಣ್ ಜೋಹರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. 
 
ಐಶ್ವರ್ಯ ರೈ ಹುಟ್ಟು ಹಬ್ಬದ ಸಮಯದಲ್ಲಿ ಮಾತನಾಡುತ್ತ ಐಶ್ ಈ ದಿನ ನಾನು ಆ ಸಂಗತಿಗಳನ್ನು ಹೇಳ ಬೇಕು ಎಂದುಕೊಂಡಿದ್ದರು ಸಹಿತ ಹೇಳಲು ಸಾಧ್ಯವಿಲ್ಲ. ಏಕೆಂದರೆ ನನಗೆ ನಿರ್ದೇಶಕ ಮತ್ತು ನಿರ್ಮಾಪಕರಿಂದ ಅನುಮತಿ ಸಿಕ್ಕಿಲ್ಲ  ಎಂದು ಹೇಳಿದ್ದಾರೆ. ಆದರೆ ಸಧ್ಯದಲ್ಲೇ ಅಮೀರ್ ಜೊತೆ ನಟಿಸುವ ಎಲ್ಲಾ ಸಾಧ್ಯತೆಗಳು ಸಹ ಇರುವುದಾಗಿ ಬಾಲಿವುಡ್ ಮಂದಿ ಮಾತನಾಡಿ ಕೊಳ್ಳುತ್ತಿದ್ದಾರೆ. 
 

ವೆಬ್ದುನಿಯಾವನ್ನು ಓದಿ