ಆಟಗಾರ ಚಿರಂಜೀವಿ ಸರ್ಜಾ ಜೊತೆ ಆಡಲು ರೆಡಿ ಆಗಿದ್ದಾರೆ ಮೇಘನ- ಪಾರೂಲ್ !

ಗುರುವಾರ, 13 ನವೆಂಬರ್ 2014 (12:21 IST)
ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭಾವಂತ ದ್ವಾರಕೀಶ್. ಅನೇಕ ಪ್ರಯೋಗಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮಗೊಂದು ಉತ್ತಮ ಸ್ಥಾನ ಪಡೆದ ಅಭಿಜಾತ ಕಲಾವಿದ ದ್ವಾರಕೀಶ್.ಆಟಗಾರ ಇದು  ದ್ವಾರಕೀಶ್  ಅವರ ಹೋಂ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿರುವ 49ನೇ ಚಿತ್ರವಾಗಿದೆ.

ಈ ಚಿತ್ರವನ್ನು ಕೆ ಎಂ ಚೈತನ್ಯ ಅವರು ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನ ರಾಜ್ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಇತ್ತೀಚಿಗೆ ವಿಷ್ಣುವರ್ಧನ ಮತ್ತು ಚಾರುಲತ ಚಿತ್ರಗಳ ಬಳಿಕ ಆಟಗಾರ ಚಿತ್ರದತ್ತ ತಮ್ಮ ಚಿತ್ತ ನೆಟ್ಟಿದ್ದಾರೆ ದ್ವಾರಕೀಶ್. ಇತ್ತೀಚಿಗೆ ಈ ಚಿತ್ರದ ಸರಳ ಮುಹೂರ್ತ ನಡೆಯಿತು.

ಪಾರೂಲ್ ಯಾದವ್ ಸೇರಿದಂತೆ  ಸಾಧುಕೋಕಿಲ, ಪ್ರಕಾಶ್ ಬೆಳವಾಡಿ, ಬಾಲಾಜಿ ಮನೋಹರ್  ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.ಆ ದಿನಗಳು , ಪರಾರಿಯಂತಹ ಯಶಸ್ವಿ ಚಿತ್ರಗಳನ್ನು ನೀಡಿರುವ ಕೆ ಎಂ ಚೈತನ್ಯ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಚಿರಂಜೀವಿ ಸರ್ಜಾ ಅವರ ಅಭಿನಯದ ಆಟಗಾರ ಅಲ್ಲದೆ ಸೀಜರ್ ಸಹ ಈಗ ಸೆಟ್ಟೇರಿದೆ.

ವೆಬ್ದುನಿಯಾವನ್ನು ಓದಿ