ಗ್ಯಾಂಗ್ ರೇಪ್ ಸುಳಿಯಲ್ಲಿ 'ಎಬಿಸಿಡಿ-2' ಸಿನಿಮಾದ ಡ್ಯಾನ್ಸರ್

ಗುರುವಾರ, 2 ಜುಲೈ 2015 (10:06 IST)
ರೆಮೋ ಡಿಸೋಜಾ ನಿರ್ದೇಶನದ ಎಬಿಸಿಡಿ-2 ಸಿನಿಮಾ ತನ್ನ ಪ್ರೋಮೋ ರಿಲೀಸ್ ಆಗಿನಿಂದ ಸುದ್ದಿಯಾಗುತ್ತಲೇ ಬಂದಿದೆ. ಆದ್ರೀಗ ಸಿನಿಮಾ ರಿಲೀಸ್ ಕೆಲ ವಾರಗಳೇ ಕಳೆದ ಬಳಿಕ ಇದೀಗ ಸಿನಿಮಾ ಮತ್ತೆ ಸುದ್ದಿಯಾಗಿದೆ. ಆದರೆ ಈ ಬಾರಿ ಚಿತ್ರ ಸುದ್ದಿಯಾಗಿರುವುದು ಬೇರೆಯದ್ದೇ ವಿಷಯಕ್ಕೆ.
ಹೌದು, ಸಿನಿಮಾದಲ್ಲಿ ನಟಿಸಿದ್ದ ಡ್ಯಾನ್ಸರ್ ನಿಲೇಶ್ ನಿರ್ಭಾವನೆ ಎಂಬಾತನ ವಿರುದ್ಧ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿದೆ. ನಿಲೇಶ್  14 ವರ್ಷದ ಅಪ್ರಾಪ್ತ ಬುದ್ಧಿಮಾಂದ್ಯೆಯೋರ್ವಳ ಮೇಲೆ ಗ್ಯಾಂಗ್ ರೇಪ್ ನಡೆಸಿದ ಆರೋಪಕ್ಕೆ ಗುರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಪಂತ್ ನಗರ ಪೊಲೀಸರು ಬಂಧಿಸಿದ್ದಾರೆ.
 
ಇನ್ನು ಪೊಲೀಸ್ ಮೂಲಗಳ ಪ್ರಕಾರ ನಿಲೇಶ್ ಕಳೆದ ಕಳೆದ ಒಂದು ತಿಂಗಳಿಂದ ತನ್ನ ಗೆಳೆಯನೊಡನೆ ಸೇರಿ ಆ ಬಾಲಕಿಯ ಮೇಲೆ ಅತ್ಯಾಚಾರವೆಸಗುತ್ತಾ ಬಂದಿದ್ದಾನಂತೆ. ಅಲ್ಲದೇ ಸಾರ್ವಜನಿಕ ಶೌಚಾಲಯ ಇಲ್ಲಾ ನಿರ್ಜನ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗುತ್ತಿದ್ದರು. ಇನ್ನು ಇತ್ತೀಚೆಗೆ ಬಾಲಕಿಯ ವರ್ತನೆಯ ಬಗ್ಗೆ ಅನುಮಾನಗೊಂಡು ಆಕೆಯ ಶಿಕ್ಷಕಿ ವಿಚಾರಿಸಿದಾಗ ರೇಪ್ ನಡೆದಿರೋದು ಬಹಿರಂಗವಾಗಿದೆ. ಬಳಿಕ ಬಾಲಕಿಯ ಹೆತ್ತವರ ಮೂಲಕ ಪಂತ್ ಪೊಲೀಸ್ ಠಾಣೆಯಲ್ಲಿ ಜೂನ್.25ರಂದು ದೂರು ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ