ಸುಮಲತಾ ಬರ್ತ್ ಡೇಗೆ ಸಿಡಿಪಿ ಬಿಡುಗಡೆ ಮಾಡಿದ ಅಭಿಷೇಕ್ ಅಂಬರೀಶ್

ಶುಕ್ರವಾರ, 27 ಆಗಸ್ಟ್ 2021 (09:14 IST)
ಬೆಂಗಳೂರು: ನಟಿ, ಸಂಸದೆ ಸುಮಲತಾ ಅಂಬರೀಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನಕ್ಕೆ ಅವರ ಕಾಮನ್ ಡಿಪಿ ಬಿಡುಗಡೆಯಾಗಿದೆ.


ಅಭಿಮಾನಿಗಳೇ ತಯಾರಿಸಿದ ಸಿಡಿಪಿಯನ್ನು ಪುತ್ರ ಅಭಿಷೇಕ್ ಅಂಬರೀಶ್ ಬಿಡುಗಡೆಗೊಳಿಸಿದ್ದಾರೆ. ಕೊರೋನಾ ಕಾರಣದಿಂದ ಬಹಿರಂಗ ಆಚರಣೆಯಿಲ್ಲದಿದ್ದರೂ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸುಮಲತಾಗೆ ವಿಶ್ ಮಾಡುತ್ತಿದ್ದಾರೆ.

ಇದಲ್ಲದೆ, ವಿವಿಧ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಸುಮಲತಾಗೆ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ