'ಸೈರಾ ನರಸಿಂಹ ರೆಡ್ಡಿ' ಚಿತ್ರದ ಶೂಟಿಂಗ್ ವೇಳೆ ಅವಘಡ ; ಅಪಾಯದಿಂದ ಪಾರಾದ ನಟ ಕಿಚ್ಚ ಸುದೀಪ್
ಶನಿವಾರ, 29 ಸೆಪ್ಟಂಬರ್ 2018 (08:56 IST)
ಬೆಂಗಳೂರು : ಟಾಲಿವುಡ್ ನ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯ ಮಾಡುತ್ತಿರುವುದು ಎಲ್ಲರಿಗೂ ತಿಳಿದೆ ಇದೆ. ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಈ ಚಿತ್ರದ ಶೂಟಿಂಗ್ ವೇಳೆ ಸಂಭವಿಸಿದ ಅವಘಡವೊಂದರಿಂದ ಪಾರಾಗಿದ್ದಾರೆ.
ರಾಮ್ ಚರಣ್ ತೇಜ ನಿರ್ಮಾಣದ ಹಾಗೂ ಚಿರಂಜೀವಿ ಅಭಿನಯದ 151 ನೇ ಬಹು ನಿರೀಕ್ಷಿತ ಸಿನಿಮಾ 'ಸೈರಾ ನರಸಿಂಹ ರೆಡ್ಡಿ' . ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನರಸಿಂಹ ರೆಡ್ಡಿ ಜೊತೆ ಕೈ ಜೋಡಿಸಿದ್ದ ಅವುಕು ಪ್ರಾಂತ್ಯದ ರಾಜನಾಗಿ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಕೂಡ ಲಾಂಚ್ ಆಗಿ ಸಖತ್ ಹಿಟ್ ಆಗಿದೆ.
ಆದರೆ ಈ ಚಿತ್ರದ ಚಿತ್ರೀಕರಣದ ವೇಳೆ ಸುದೀಪ್ ಕುದುರೆ ಸವಾರಿ ನಡೆಸುವ ದೃಶ್ಯಗಳು ಇವೆ. ಇದರಲ್ಲಿ ಕಿಚ್ಚ ಉತ್ಸಾಹದಿಂದಲೇ ಪಾಲ್ಗೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಸುದೀಪ್ ಕುದುರೆಯಿಂದ ಕೆಳಗೆ ಬಿದ್ದಿದ್ದಾರೆ. ಒಂದಷ್ಟು ದೂರ ಕುದುರೆ ಅವರನ್ನು ಎಳೆದುಕೊಂಡು ಹೋಗಿದೆ. ಆದರೆ ಸುದೀಪ್ ಅವರಿಗೆ ಯಾವುದೇ ರೀತಿಯ ಗಾಯಗಳೂ ಆಗಿಲ್ಲ. ಚಿತ್ರತಂಡ ಈ ಬಗ್ಗೆ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಸುದೀಪ್ ದುರಂತದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ