ಅಲ್ಲದೆ ಡಿಪ್ಪಿ ಹೇಳಿರೋದು ನಟನಾ ಶೈಲಿಯು ಕಲಿಕೆಯಿಂದ ಬರುವಂತಹದಲ್ಲ, ಅದು ನಮ್ಮಲ್ಲೇ ಆ ಭಾವಗಳು ಹುಟ್ಟ ಬೇಕು. ತಾನು ನಟನೆಯ ಬಗ್ಗೆ ಹೆಚ್ಚು ಅರಿತಿದ್ದು ಬೇರೆಯವರು ಮಾಡುವ ಅಭಿನಯವನ್ನು ವೀಕ್ಷಿಸುತ್ತ, ಅವರ ಪ್ರತಿಯೊಂದು ಅಂಶವನ್ನು ಗಮನಿಸುತ್ತಾ ಮನದಟ್ಟು ಮಾಡಿಕೊಂಡೆ ಎಂದು ಈ ಸಮಯದಲ್ಲಿ ಹೇಳಿದ್ದಾಳೆ.
ದೀಪಿಕ ತನ್ನ ಕೆರಿಯರ್ ಆರಂಭಿಕ ದಿನಗಳಲ್ಲಿ ಅನುಪಮ್ ಖೇರ್ ಅವರ ನಟನ ಶಾಲೆಯಲ್ಲಿ ಕಲಿಕೆ ಮಾಡಿ , ಅಲ್ಲಿ ಅವರಿಂದ ಪ್ರತಿಭಾವಂತೆ ಎಂದು ಹೊಗಳಿಸಿ ಕೊಂಡಿದ್ದಳಂತೆ. ಒಟ್ಟಾರೆ ಓಂ ಶಾಂತಿ ಓಂ ನಿಂದ ಬಾಲಿವುಡ್ಗೆ ಜಿಗಿದ ಈ ಕನ್ನಡದ ಹುಡುಗಿ ಈಗ ಈ ಪರಿ ಬೆಳೆದಿರುವುದು ಸಂತೋಷ ಪಡುವ ಸಂಗತಿ. ಹ್ಯಾಪಿ ನ್ಯೂ ಇಯರ್ ಮುಂಬರುವ ಶುಕ್ರವಾರ ಅಂದರೆ ದೀಪಾವಳಿಯ ದಿನದಂದು ಬಿಡುಗಡೆ ಆಗಲಿದೆ.