ಹೈದರಾಬಾದ್ : ನಿತಿನ್ ಮತ್ತು ಕೀರ್ತಿ ಸುರೇಶ್ ಅವರು ಮುಂಬರುವ ರೊಮ್ಯಾಂಟಿಕ್ ಮತ್ತು ಹಾಸ್ಯ ಚಿತ್ರ ರಂಗ್ ದೇ ಯಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರದಲ್ಲಿ ನಗ್ನ ದೃಶ್ಯವೊಂದನ್ನು ಚಿತ್ರೀಕರಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಮಾರ್ಚ್ 26ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕಾಗಿ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾಗೂ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಅಲ್ಲದೇ ಇತ್ತೀಚೆಗೆ ಈ ಚಿತ್ರದ ಬಗ್ಗೆ ಸಂದರ್ಶನ ನಡೆಸಲಾಗಿದ್ದು, ಆ ವೇಳೆ ನಟ ವೆನ್ನೆಲಾ ಕಿಶೋರ್ ಅವರು ತಾವು ಈ ಚಿತ್ರದಲ್ಲಿ ನಗ್ನ ದೃಶ್ಯದಲ್ಲಿ ನಟಿಸಿರುವುದಾಗಿ ತಿಳಿಸಿ ಪ್ರೇಕ್ಷರಿಗೆ ಶಾಕ್ ನೀಡಿದ್ದಾರೆ.
ಆದರೆ ಅದನ್ನು ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ ಇದರಿಂದ ಪ್ರೇಕ್ಷಕರಿಗೆ ಅಹಿತಕರ ಅನಿಸುವುದಿಲ್ಲ. ಆ ದೃಶ್ಯವನ್ನು ಸೆನ್ಸಾರ್ ಮಂಡಳಿ ಡಿಲೀಟ್ ಮಾಡಲಿಲ್ಲ ಎಂದು ಅವರು ತಿಳಿಸಿದ್ದಾರೆ.