ಚೆನ್ನೈ : ಸಿನಿಮಾದಲ್ಲಿ ಹೆಚ್ಚಾಗಿ ಸಿನಿಮಾತಾರೆಯರ ಪುತ್ರ-ಪುತ್ರಿಯರು ಮಿಂಚುವುದು ಸಾಮಾನ್ಯ ಸಂಗತಿಯಾಗಿದೆ. ಎಲ್ಲಾ ಸಿನಿಮಾ ರಂಗದಲ್ಲೂ ಇದೇ ಕಥೆ. ಹಾಗಾಗಿ ಇದೀಗ ಖ್ಯಾತ ನಟನ ಪುತ್ರ ಆಯ್ತು ಇದೀಗ ಅವರ ಮೊಮ್ಮಗ ಕೂಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ.
ಹೌದು. ನಟ ವಿಜಯ್ ಕುಮಾರ್ ಅವರ ಮಗನಾಗಿ ಗುರುತಿಸಿಕೊಂಡು ಚಿತ್ರರಂಗದಲ್ಲಿ ನಾಯಕನಾಗಿ ನಟಿಸುತ್ತಿದ್ದ ಅರುಣ್ ವಿಜಯ್ ಅವರು ಹಲವಾರು ಅಡೆತಡೆಗಳನ್ನು ದಾಟಿ ಈಗ ಉತ್ತಮ ಸ್ಥಾನದಲ್ಲಿದ್ದಾರೆ. ಸದ್ಯ ಅರುಣ್ ವಿಜಯ್ ಅವರ ಪುತ್ರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದ ಚೀತ್ರೀಕರಣ ಆರಂಭವಾಗಿದೆ. ಈ ಬಗ್ಗೆ ಅರುಣ್ ವಿಜಯ್ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.