ನಟ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ ಲೊಕೇಷನ್ ವಿಡಿಯೋ ಲೀಕ್

Krishnaveni K

ಮಂಗಳವಾರ, 26 ಮಾರ್ಚ್ 2024 (09:09 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಡೆವಿಲ್ ಸಿನಿಮಾದ ಶೂಟಿಂಗ್ ಆರಂಭವಾಗಿದೆ. ಇದೀಗ ಲೊಕೇಷನ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ.

ಕಾಟೇರ ಸಿನಿಮಾ ಸಕ್ಸಸ್ ಬಳಿಕ ದರ್ಶನ್ ನಾಯಕರಾಗಿ ನಟಿಸುತ್ತಿರುವ ಸಿನಿಮಾ ಡೆವಿಲ್. ಈ ಸಿನಿಮಾದ ಮುಹೂರ್ತ ಕಳೆದ ವರ್ಷ ಕೊನೆಯಲ್ಲಿ ನಡೆದಿತ್ತು. ಇದೀಗ ಕಾಟೇರ ಸಕ್ಸಸ್ ಬಳಿಕ ಕೆಲವು ದಿನ ಬ್ರೇಕ್ ತೆಗೆದುಕೊಂಡು ದರ್ಶನ್ ಹೊಸ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿಯೇ ಮೊದಲ ಹಂತದ ಶೂಟಿಂಗ್ ನಡೆಯುತ್ತಿದೆ. ರಾಕ್ ಲೈನ್ ಸ್ಟುಡಿಯೋದಲ್ಲಿ ವಿಶೇಷ ಸೆಟ್ ಹಾಕಲಾಗಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಸಿನಿಮಾದ ಲೊಕೇಷನ್ ವಿಡಿಯೋವೊಂದು ಹರಿದಾಡುತ್ತಿದೆ. ಡೆವಿಲ್ ಸಿನಿಮಾಗಾಗಿ ವಿಶೇಷ ಸೆಟ್ ಹಾಕಿರುವುದು ಇದರಲ್ಲಿ ಕಂಡುಬರುತ್ತಿದೆ.

ಮಿಲನ ಸಿನಿಮಾ ಖ್ಯಾತಿಯ ಪ್ರಕಾಶ್ ವೀರ್ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು, ಔಟ್ ಆಂಡ್ ಔಟ್ ಮಾಸ್ ಕತೆಯನ್ನೊಳಗೊಂಡಿದೆ. ಈಗಾಗಲೇ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದ್ದು, ದರ್ಶನ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ