ಮುಂಬೈ: ಇಂದು ದೇಶದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಅದಲ್ಲದೆ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಜೋಡಿಗಳಿಗೆ ಹೋಳಿ ಸಂಭ್ರಮ ಜೋರಾಗಿಯೇ ಇತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿ ಶೇರ್ ಮಾಡಿದ್ದಾರೆ.
ನಟಿ ರಕುಲ್ ಪ್ರೀತ್ ಹಾಗೂ ಜಾಕಿ ಭಗ್ನಾನಿ ಅವರು ಬಣ್ಣದೋಕುಳಿಯಲ್ಲಿ ಆಟಿದ ಸಂಭ್ರಮದ ಕ್ಷಣಗಳ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕೃತಿ ಕರಾಬಂದ ಪತಿಯೊಂದಿಗೆ ಸೆಲೆಬ್ರೇಟ್ ಮಾಡಿದ ರೀಲ್ಸ್‌ನೊಂದಿಗೆ ನಾಡಿನ ಜನತೆಗೆ ಹೋಳಿ ಹಬ್ಬದ ಶುಭಕೋರಿದ್ದಾರೆ.
ನಟಿ ಪ್ರೀತಿ ಜಿಂಟಾ ಪತಿ ಜೀನಾ ಗೊಡೆನೊಉಫ್ ಅವರು ಬಣ್ಣದ ಓಕೋಳಿಯಲ್ಲಿ ಆಟವಾಡಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.