ನನ್ನ ಮಗನಿಗೆ ನೋಟಿಸ್ ಬಂದಿದೆ, ಪೊಲೀಸರಿಗೆ ಸತ್ಯ ಹೇಳುತ್ತೇವೆ: ನಟ ದೇವರಾಜ್
ಸೆ.29ರಂದು ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಗೀತಾ ವಿಷ್ಣು ಕಾರನ್ನ ಅಡ್ಡಾ ದಿಡ್ಡಿ ಚಲಾಯಿಸಿ ಅಪಘಾತ ಎಸಗಿದ್ದರು. ಈ ಸಂದರ್ಭ ಕಾರಿನಲ್ಲಿ ಇಬ್ಬರು ಸ್ಯಾಂಡಲ್ ವುಡ್ ನಟರಿದ್ದರೆಂಬ ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ನೋಟಿಸ್ ನೀಡಿದ್ದಾರೆ. ರಕ್ತ, ಮೂತ್ರದ ಮಾದರಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.