ಅಭಿಮಾನಿಗೆ ಬೈ ಟು ಲವ್ ನಾಯಕ ಧನ್ವೀರ್ ಹಲ್ಲೆ: ಎಫ್ ಐಆರ್ ದಾಖಲು
ಫೆಬ್ರವರಿ 17 ರಂದು ಘಟನೆ ನಡೆದಿದೆ ಎನ್ನಲಾಗಿದೆ. ಅಭಿಮಾನಿ ಚಂದ್ರಶೇಖರ್ ಎಂಬವರ ಮೇಲೆ ಧನ್ವೀರ್ ಮತ್ತು ಸ್ನೇಹಿತರು ಸೆಲ್ಫೀ ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ನಿನ್ನೆ ಬೈ ಟು ಲವ್ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಪ್ರಚಾರ ಕೆಲಸದಲ್ಲಿದ್ದಾಗ ಘಟನೆ ನಡೆದಿದೆ. ಚಂದ್ರಶೇಖರ್ ಮತ್ತು ಸ್ನೇಹಿತರು ಸೆಲ್ಫೀ ಕೇಳಲು ಹೋದಾಗ ಕನ್ನಡ ಬರಲ್ವಾ ಎಂದು ಬೈದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.