ಪುಟ್ಟಕ್ಕನ ಮಕ್ಕಳು ಧಾರವಾಹಿ ಹೀರೋ ಧನುಷ್ ಗೆ ರಾಧಿಕಾ ಪಂಡಿತ್ ಶಹಬ್ಬಾಶ್

ಶನಿವಾರ, 19 ಫೆಬ್ರವರಿ 2022 (09:39 IST)
ಬೆಂಗಳೂರು: ಟಿಆರ್ ಪಿಯಲ್ಲಿ ನಂ.1 ಆಗಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಹೀರೋ ಕಂಠಿ ಅಲಿಯಾಸ್ ಧನುಷ್ ಈಗ ಮನೆ ಮಾತಾಗಿದ್ದಾರೆ. ಸುಂದರ ಮೊಗದ, ಎತ್ತರ ನಿಲುವಿನ ಭರವಸೆಯ ನಟನಿಗೆ ಸ್ವತಃ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ರಿಂದ ಹೊಗಳಿಕೆ ಸಿಕ್ಕಿದೆಯಂತೆ.

ನಿನ್ನೆ ಧನುಷ್ ಹುಟ್ಟುಹಬ್ಬವಿತ್ತು. ಈ ಕಾರಣಕ್ಕೆ ಪುಟ್ಟಕ್ಕನ ಮಕ್ಕಳು ಧಾರವಾಹಿ ತಂಡ ಫೇಸ್ ಬುಕ್ ಲೈವ್ ಬಂದಿತ್ತು. ಈ ವೇಳೆ ಧನುಷ್ ತಾವು ರಾಧಿಕಾ ಪಂಡಿತ್ ರನ್ನು ಭೇಟಿಯಾದ ಖುಷಿಯನ್ನು ಹಂಚಿಕೊಂಡಿದ್ದಾರೆ.

‘ನನಗೆ ರಾಕಿಂಗ್ ಸ್ಟಾರ್ ಯಶ್ ಎಂದರೆ ಇಷ್ಟ. ಹೀಗಾಗಿ ಅವರನ್ನು ಭೇಟಿಯಾಗಲು ಮನೆಗೆ ಹೋಗಿದ್ದೆ. ಆಗ ರಾಧಿಕಾ ಪಂಡಿತ್ ಅವರ ತಾಯಿ ನನ್ನನ್ನು ಗುರುತಿಸಿ ಇವರು ಪುಟ್ಟಕ್ಕನ ಮಕ್ಕಳ ಧಾರವಾಹಿ ಹೀರೋ ಎಂದು ರಾಧಿಕಾಗೆ ಪರಿಚಯಿಸಿದರು. ನನ್ನನ್ನು ನೋಡಿ ರಾಧಿಕಾ ಖುಷಿಪಟ್ಟರು ಮತ್ತು ನನ್ನ ಅಭಿನಯವನ್ನು ಮೆಚ್ಚಿಕೊಂಡರು. ಇದನ್ನು ನಾನು ಜೀವನದಲ್ಲಿ ಮರೆಯಲು ಸಾಧ‍್ಯವಿಲ್ಲ’ ಎಂದು ಧನುಷ್ ಹೇಳಿಕೊಂಡಿದ್ದಾರೆ.

ಅಂದ ಹಾಗೆ, ಪುಟ್ಟಕ್ಕನ ಮಕ್ಕಳು ಧಾರವಾಹಿ ಮೂಲಕ ಮನೆ ಮಾತಾಗಿರುವ ಧನುಷ್ ಗೆ ಈ ಕೆಲವು ಸಿನಿಮಾ ಆಫರ್ ಗಳೂ ಬರುತ್ತಿವೆಯಂತೆ. ಹೀಗಾಗಿ ಈ ಹೀರೋ ಸದ್ಯದಲ್ಲೇ ಬೆಳ್ಳಿ ತೆರೆ ಮೇಲೆ ಕಂಡುಬಂದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ