ನಟ, ನಿರ್ದೇಶಕ ಸುಂದರ್ ಸಿ ಗೆ ಕೊರೊನಾ; ಆಸ್ಪತ್ರೆಗೆ ದಾಖಲು

ಸೋಮವಾರ, 12 ಏಪ್ರಿಲ್ 2021 (10:03 IST)
ಚೆನ್ನೈ : ಜನಪ್ರಿಯ ಕಾಲಿವುಡ್ ನಟ , ನಿರ್ದೇಶಕ ಸುಂದರ್ ಸಿ ಅವರಿಗೆ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಸುಂದರ್ ಸಿ ಅವರ ಪತ್ನಿ ಖುಷ್ಬು ಅವರು ಟ್ವೀಟರ್ ನಲ್ಲಿ ಪೋಸ್ಟ ಮಾಡಿ ಮಾಹಿತಿ ನೀಡಿದ್ದಾರೆ. ನನ್ನ ಪತಿ ಸುಂದರ್ ಸಿ ಅವರು ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ. ಮುನ್ನೆಚ್ಚರಿಕೆ  ಕ್ರಮಗಳಿಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರೊಂದಿಗೆ ಸಂಪರ್ಕದಲ್ಲಿದ್ದವರು ಕೂಡಲೆ ಕೊರೊನಾ ಟೆಸ್ಟ್ ಮಾಡಿಸಿ ಎಂದು ತಿಳಿಸಿದ್ದಾರೆ.

ಹಾಗೇ ತನ್ನ ಪತಿಯ ಜೊತೆ ಕುಟುಂಬದ ಇನ್ನಿಬ್ಬರು ಸದಸ್ಯರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಅವರು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರಿಗೂ ಶೀತದ ಲಕ್ಷಣ ಕಂಡುಬಂದಿತ್ತು ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ