ಚೆನ್ನೈ : ಕಾಲಿವುಡ್ ನಟ ವಿಕ್ರಮ್ ಅವರು ಕೊಬ್ರಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ. ಆದರೆ ಈ ನಡುವೆ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ವದಂತಿ ಕೇಳಿಬರುತ್ತಿದೆ.
ಹೌದು. ಇತ್ತೀಚೆಗಷ್ಟೇ ಕೊಬ್ರಾ ಚಿತ್ರತಂಡ ರಷ್ಯಾದಲ್ಲಿ ಶೂಟಿಂಗ್ ಮುಗಿಸಿ ಚೆನ್ನೈಗೆ ಮರಳಿದೆ. ಈ ಮಧ್ಯೆ ಸಾಮಾಜಿಕ ಮಾಧ್ಯಮದಲ್ಲಿ ನೆಟ್ ಫ್ಲಿಕ್ಸ್ ವಿಕ್ರಮ್ ಅವರ ಕೊಬ್ರಾ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಾಪಕರು ಈ ವದಂತಿಯನ್ನು ನಿರಾಕರಿಸಿದ್ದಾರೆ. ಇದು ನಕಲಿ ಸುದ್ದಿ ಎಂದು ಹೇಳಿದ್ದಾರೆ. ಹಾಗಾಗಿ ಕೊಬ್ರಾ ಚಿತ್ರ ಥಿಯೇಟರ್ ನಲ್ಲಿಯೇ ಬಿಡುಗಡೆಯಾಗಲಿದೆ ಎಂಬುದು ಆ ಮೂಲಕ ಖಚಿತವಾಗಿದೆ.