ಪ್ರಧಾನಿ ಮೋದಿ ಭೇಟಿಯಾದ ಫೋಟೋ ಹಂಚಿದ ನಟ ಗೋವಿಂದ

sampriya

ಗುರುವಾರ, 23 ಮೇ 2024 (17:53 IST)
Photo By X
ಮುಂಬೈ: ಲೋಕಸಭೆ ಚುನಾವಣೆಗೂ ಮುನ್ನಾ ಶಿವಸೇನೆ ಪಕ್ಷಕ್ಕೆ ಸೇರ್ಪಡೆಗೊಂಡ ನಟ ಕಮ್ ರಾಜಕಾರಣಿ ಗೋವಿಂದ ಅವರು ಇಂದು ಮೋದಿ ಜತೆಗಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ಗೋವಿಂದ ಅವರು ಪ್ರಧಾನಿ ಮೋದಿಯೊಂದಿಗೆ ನಿಂತು ಶುಭಾಶಯ ಹೇಳುತ್ತಿರುವುದು ನೋಡಬಹುದು. ಇನ್ನೂ ಫೋಟೋದ ಕೆಳಗಡೆ ಬರೆದುಕೊಂಡಿರುವ ಗೋವಿಂದ ಅವರು, ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರನ್ನು ಮುಂಬೈನಲ್ಲಿ ಪ್ರಚಾರದ ಸಂದರ್ಭದಲ್ಲಿ ಭೇಟಿಯಾಗುವುದು ಗೌರವವಾಗಿದೆ. @narendramodi” ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಇನ್ನೂ ಗೋವಿಂದ ಅವರು ಮಾರ್ಚ್ 2024 ರಲ್ಲಿ, ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನೆ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಮೂಲಕ 14 ವರ್ಷಗಳ ನಂತರ ರಾಜಕೀಯಕ್ಕೆ ಗೋವಿಂದ ಅವರು ಮರಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ