16 ಜನರು ಕೊನೆಯುಸಿರೆಳೆದ ಪ್ರದೇಶದಲ್ಲಿ ಮೋದಿ ರೋಡ್ ಶೋ ನಡೆಸಿದ್ದು ಅಮಾನವೀಯ: ಸಂಜಯ್ ರಾವತ್

Sampriya

ಗುರುವಾರ, 16 ಮೇ 2024 (18:23 IST)
ಮುಂಬೈ: ಈಚೆಗೆ ಗಾಳಿ ಮಳೆಗೆ ಹೋರ್ಡಿಂಗ್ ಬಿದ್ದು 16 ಮಂದಿ ಸಾವನ್ನಪ್ಪಿದ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿರುವುದು ಅಮಾನವೀಯ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಕಿಡಿಕಾರಿದರು.

ಬುಧವಾರ ಮಧ್ಯಾಹ್ನ ಘಾಟ್‌ಕೋಪರ್ ಪಶ್ಚಿಮದಿಂದ ಘಾಟ್‌ಕೋಪರ್ ಪೂರ್ವಕ್ಕೆ ಪ್ರಧಾನಿ ಮೋದಿಯವರ ರೋಡ್‌ಶೋ ನಿಮಿತ್ತ 12 ಗಂಟೆಯಿಂದ ರಸ್ತೆಗಳು ಮತ್ತು ಮೆಟ್ರೋ ರೈಲು ಸೇವೆಗಳನ್ನು ಬಂದ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಒಬ್ಬ ವ್ಯಕ್ತಿಯ ಪ್ರಚಾರಕ್ಕಾಗಿ ರಸ್ತೆಗಳನ್ನು ಮುಚ್ಚಿ ಜನರಿಗೆ ತೊಂದರೆ ಕೊಟ್ಟಿರುವ ಘಟನೆ ಎಂದೂ ನಡೆದಿಲ್ಲ.

ಪ್ರಧಾನಿ ಮೋದಿ ಅವರು 16 ಜನ ಪ್ರಾಣ ಕಳೆದುಕೊಂಡ ಪ್ರದೇಶದಲ್ಲೆ ರೋಡ್ ಶೋ ನಡೆಸಿರುವುದು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ 14ರಂದು ಮುಂಬೈನಲ್ಲಿ ಸುರಿದ ಗಾಳಿ ಮಳೆಗೆ ಘಾಟ್‌ಕೋಪರ್‌ನ ಛೇಡಾ ನಗರ ಪ್ರದೇಶದಲ್ಲಿ 120 x 120 ಅಡಿಗಳ ಬೃಹತ್ ಹೋರ್ಡಿಂಗ್ ಕುಸಿದು 16 ಮಂದಿ ಸಾವನ್ನಪ್ಪಿ,  75 ಮಂದಿ ಗಾಯಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ