‘ರಾಮಾಯಣ 3ಡಿ’ ಚಿತ್ರದಲ್ಲಿ ಲಾರ್ಡ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ನಟ ಮಹೇಶ್ ಬಾಬು

ಗುರುವಾರ, 1 ಏಪ್ರಿಲ್ 2021 (11:38 IST)
ಹೈದರಾಬಾದ್ : ಟಾಲಿವುಡ್ ನಟ ಮಹೇಶ್ ಬಾಬು ಅವರು ಮಧು ಮಂಟೆನಾ ‘ರಾಮಾಯಣ 3ಡಿ’ ಚಿತ್ರದಲ್ಲಿ ಲಾರ್ಡ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಮಧು ಮಂಟೆನಾ ‘ರಾಮಾಯಣ 3ಡಿ’ ದೊಡ್ಡ ಬಜೆಟ್ ಯೋಜನೆಯಾಗಿದ್ದು,  ಇದರಲ್ಲಿ ಬಾಲಿವುಡ್ ನಟ ಹೃತಿಕ್ ರೋಶನ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಹೃತಿಕ್ ರೋಷನ್ ರಾಮನ ಪಾತ್ರ ನಿರ್ವಹಿಸುತ್ತಿಲ್ಲ ಎಂದು ದೃಢಪಟ್ಟಿದೆ. ಹಾಗಾಗಿ ಈ ಚಿತ್ರದಲ್ಲಿ ಭಗವಾನ್ ರಾಮ ಪಾತ್ರದಲ್ಲಿ ನಟಿಸಲು ಮಹೇಶ್ ಬಾಬು ಅವರನ್ನು ಕರೆತರಲು ನಿರ್ಮಾಪಕರು ಯೋಜಿಸುತ್ತಿದ್ದಾರೆ ಎನ್ನಲಾಗಿದೆ.

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರು ಈಗಾಗಲೇ  ‘ಸರ್ಕಾರಿ ವಾರಿ ಪಾಟಾ’  ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು ಅವರು  ‘ರಾಮಾಯಣ 3ಡಿ’ ಚಿತ್ರದ ಕಥೆಯನ್ನು ಇಷ್ಟಪಟ್ಟಿದ್ದು, ಆದರೆ ಇನ್ನೂ ಅನುಮತಿ ನೀಡಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ