'ವಕೀಲ ಸಾಬ್' ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮಕ್ಕೆ ಸರ್ಕಾರದಿಂದ ತಡೆ

ಗುರುವಾರ, 1 ಏಪ್ರಿಲ್ 2021 (11:07 IST)
ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು “ವಕೀಲ್ ಸಾಬ್ “ಚಿತ್ರದಲ್ಲಿ ವಕೀಲನ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಚಿತ್ರ ಏಪ್ರಿಲ್ 9ರಂದು ವಿಶ್ವವ್ಯಾಪಿ ಬಿಡುಗಡೆಯಾಗಲಿದೆ.

ಹಾಗಾಗಿ ವಕೀಲ್ ಸಾಬ್ ಚಿತ್ರ ನಿರ್ಮಾಪಕರು ಏಪ್ರಿಲ್ 3ರಂದು ಹೈದರಾಬಾದ್ ನ ಯೂಸುಫ್ ಗುಡಾದಲ್ಲಿ ಅದ್ದೂರಿ  ಬಿಡುಗಡೆ ಪೂರ್ವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆದರೆ ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತೆಲಂಗಾಣ ಸರ್ಕಾರ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಲಿಲ್ಲ ಎನ್ನಲಾಗಿದೆ.

ಹಾಗಾಗಿ ಚಿತ್ರ ನಿರ್ಮಾಪಕರು ಏಪ್ರಿಲ್ 4ರಂದು ಸಂಜೆ ಈ ಕಾರ್ಯಕ್ರಮ ನಡೆಸಲು ಯೋಜಿಸುತ್ತಿದ್ದು, ಇದರಲ್ಲಿ ಕೆಲವು ಮಂದಿ ಮಾತ್ರ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಹಾಗೇ ಕಾರ್ಯಕ್ರಮ ಯೂಟ್ಯೂಬ್ ಮತ್ತು ಟಿವಿಯಲ್ಲಿ ನೇರ ಪ್ರಸಾರವಾಗಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ