ನಟ ಸೈಫ್ ಅಲಿ ಖಾನ್‌ ಮೇಲೆ ಹಲ್ಲೆ ನಡೆದಿದ್ದು ಈ ಕಾರಣಕ್ಕೆ, ಆರೋಪಿ ಬಾಯ್ಬಿಟ್ಟಿದ್ದೇನು

Sampriya

ಭಾನುವಾರ, 19 ಜನವರಿ 2025 (11:00 IST)
Photo Courtesy X
ಮುಂಬೈ:  ಬಾಲಿವುಡ್ ನಟ ಸೈಫ್‌ ಅಲಿ ಖಾನ್ ಚಾಲು ಇರಿತ ಪ್ರಕರಣ ಸಂಬಂಧ ಬಂಧಿತ ಆರೋಪಿಯನ್ನು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದ್ದು, ಈತ ಬಾಂಗ್ಲಾದೇಶ ಪ್ರಜೆ ಎಂದು ತಿಳಿದುಬಂದಿದೆ.

ಆತ ನಟ ಸೈಫ್ ಅಲಿಖಾನ್ ಮನೆಗೆ ದರೋಡೆಗೆ ಪ್ರವೇಶಿಸಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಂಬೈ ಪೊಲೀಸರು, ಬಾಲಿವುಡ್ ನಟ ಸೈಫ್ ಅಲಿಖಾನ್ ದಾಳಿ ಪ್ರಕರಣದಲ್ಲಿ ಬಂಧಿತ ಆರೋಪಿ ಬಾಂಗ್ಲಾದೇಶದ ಪ್ರಜೆಯಾಗಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.


ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿದ ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಭಾರತಕ್ಕೆ ಪ್ರವೇಶಿಸಿದ ನಂತರ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಾಯಿಸಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

30 ವರ್ಷ ವಯಸ್ಸಿನವನಾಗಿದ್ದು, ಆತ ದರೋಡೆ ಉದ್ದೇಶದಿಂದ ನಟ ಸೈಫ್ ಅಲಿಖಾನ್ ಮನೆಗೆ ಪ್ರವೇಶಿಸಿದ್ದಾನೆ ಎಂದು ಡಿಸಿಪಿ ವಲಯ 9 ದೀಕ್ಷಿತ್ ಗೆಡಮ್ ಹೇಳಿದ್ದಾರೆ.

ಜನವರಿ 16 ರಂದು ಬೆಳಗಿನ ಜಾವ 2 ಗಂಟೆಗೆ ನಟ ಸೈಫ್ ಅಲಿ ಖಾನ್ ಮನೆಯೊಳಗೆ ಪ್ರವೇಶಿಸಿದ ಮೊಹಮ್ಮದ್ ಶರೀಫುಲ್ ನಟನ ಮೇಲೆ ಗಂಭೀರ ದಾಳಿ ಮಾಡಿದ್ದಾನೆ. ದರೋಡೆಕೋರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ಹೆಚ್ಚಿನ ತನಿಖೆಯನ್ನು ನಂತರ ನಡೆಸಲಾಗುವುದು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ