ಶೂಟಿಂಗ್ ವೇಳೆ ನಟ ವಿಶಾಲ್ ಗೆ ಅವಘಡ

ಗುರುವಾರ, 23 ಫೆಬ್ರವರಿ 2023 (09:10 IST)
Photo Courtesy: Twitter
ಹೈದರಾಬಾದ್: ಸಾಹಸ ದೃಶ್ಯವೊಂದರ ಚಿತ್ರೀಕರಣ ವೇಳೆ ಟಾಲಿವುಡ್ ನಟ ವಿಶಾಲ್ ಭಾರೀ ಅವಘಡವೊಂದರಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ.

ಮಾರ್ಕ್ ಆಂಟೊನಿ ಚಿತ್ರದ ಚಿತ್ರೀಕರಣ ವೇಳೆ ಅವಘಡವಾಗಿದೆ. ಲಾರಿ ನುಗ್ಗಿಸುವ ದೃಶ್ಯದ ಚಿತ್ರೀಕರಣವಿತ್ತು. ಈ ವೇಳೆ ವಿಶಾಲ್ ಲಾರಿಯ ಎದುರುಗಡೆ ಇದ್ದರು.

ಲಾರಿ ಚಾಲಕನ ನಿಯಂತ್ರಣ ತಪ್ಪಿ ವಿಶಾಲ್ ಮೇಲೆ ಲಾರಿ ಹರಿಯುವ ಅಪಾಯವಿತ್ತು. ಆದರೆ ಕೂದಲೆಳೆಯಲ್ಲಿ ವಿಶಾಲ್ ಪಾರಾಗಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ಅಭಿಮಾನಿಗಳು ಆತಂಕಗೊಂಡಿದ್ದರು. ಬಳಿಕ ಸ್ವತಃ ವಿಶಾಲ್ ತಾವು ಆರಾಮವಾಗಿರುವುದಾಗಿ ಸ್ಪಷ್ಟನೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ