ಆಸ್ಕರ್ ಅವಾರ್ಡ್ಸ್ ಗೆ ಬರಿಗಾಲಲ್ಲಿ ತೆರಳಿದ ರಾಮ್ ಚರಣ್ ತೇಜ!
ಆದರೆ ರಾಮ್ ಚರಣ್ ತೇಜ ಈಗ ಶಬರಿಮಲೆ ಅಯ್ಯಪ್ಪ ಮಾಲಾಧಾರಿಯಾಗಿದ್ದು, ಈ ಕಾರಣಕ್ಕೆ ಆಸ್ಕರ್ ಸಮಾರಂಭಕ್ಕೂ ಅಯ್ಯಪ್ಪ ವಸ್ತ್ರ ಧರಿಸಿ ಬರಿಗಾಲಲ್ಲಿ ತೆರಳಿದ್ದಾರೆ.
ವಿದೇಶ ಪ್ರವಾಸಕ್ಕೆ ತೆರಳುವಾಗಲೂ ರಾಮ್ ಚರಣ್ ತಮ್ಮ ವ್ರತ ಬಿಡದೇ ಬರಿಗಾಲಲ್ಲಿ ತೆರಳಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೆಲವು ದಿನಗಳ ಹಿಂದೆ ರಾಮ್ ಚರಣ್ ತೇಜ್ ಅಯ್ಯಪ್ಪ ವ್ರತ ಕೈಗೊಂಡಿದ್ದರು. ಆಸ್ಕರ್ ಸಮಾರಂಭದಲ್ಲೂ ರಾಮ್ ಚರಣ್ ಇದೇ ರೀತಿ ಪಾಲ್ಗೊಳ‍್ಳಲಿದ್ದಾರೆ. ಎಲ್ಲೇ ಹೋದರೂ ತಮ್ಮ ಸಂಸ್ಕೃತಿ ಮರೆಯಬಾರದು ಎನ್ನುತ್ತಾರೆ. ಅದನ್ನು ರಾಮ್ ಚರಣ್ ಮಾಡಿ ತೋರಿಸಲಿದ್ದಾರೆ.