’ಕರಿಯ’ ಬೆಡಗಿ ಅಭಿನಯಶ್ರೀ ಕೆರಿಯರ್ ಗ್ರಾಫ್ ಖತಂ ಆಯ್ತಾ?

ಶುಕ್ರವಾರ, 2 ಡಿಸೆಂಬರ್ 2016 (12:14 IST)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಕರಿಯ ಚಿತ್ರದಲ್ಲಿ ಅಭಿನಯಿಸಿದ್ದ ಅಭಿನಯಶ್ರೀ ಈಗೇನು ಮಾಡುತ್ತಿದ್ದಾರೆ? ತೆಲುಗು, ತಮಿಳಿನಲ್ಲೂ ಸಾಕಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ಈ ಬೆಡಗಿ ಈಗ ಅವಕಾಶಗಳಿಲ್ಲದೆ ಪರಿತಪಿಸುತ್ತಿದ್ದಾಳೆ ಎನ್ನಲಾಗಿದೆ. 
 
ಒಂದಷ್ಟು ದಿನ ಐಟ ಸಾಂಗ್, ಸ್ಪೆಷಲ್ ಸಾಂಗ್‍ಗಳಲ್ಲಿ ಮಿಂಚಿದ್ದ ಈ ಬೆಡಗಿಗೆ ಈಗ ಅವೂ ಸಿಗುತ್ತಿಲ್ಲವಂತೆ. ಸದ್ಯಕ್ಕೆ ಈಗ ಕೊರಿಯೋಗ್ರಾಫರ್ ಆಗಿ ಅಷ್ಟೋ ಇಷ್ಟೋ ಸಂಪಾದನೆ ಮಾಡುತ್ತಾ ವೃತ್ತಿಜೀವನ ನಡೆಸುತ್ತಿದ್ದಾರೆ. 
 
ಕೊರಿಯೋಗ್ರಫಿ ಮಾಡುತ್ತಿದ್ದರೂ ಸಂಪಾದನೆ ಊಹಿಸಿದ ಮಟ್ಟದಲ್ಲಿ ಇಲ್ಲವಂತೆ. ಅವರ ತಾಯಿ ಹಿರಿಯ ನಟಿ ಅನುರಾಧಾ ಅವರು ವಿಲನ್ ಪಾತ್ರಗಳಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಮಗಳ ವೃತ್ತಿಬದುಕಿಗೆ ತಿರುವು ನೀಡಲು ಅವರೂ ಶ್ರಮಿಸುತ್ತಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ಬಣ್ಣಹಚ್ಚಲು ದೇಹದ ತೂಕವನ್ನೂ ಇಳಿಸಿಕೊಂಡಿದ್ದಾರಂತೆ ಅಭಿನಯಶ್ರೀ. ಅವರು ಮತ್ತೆ ಸೊಂಟ ಬಳುಕಿಸುವ ದಿನಗಳು ದೂರ ಇಲ್ಲ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ