ತಮಿಳಿನ ‘ಅಡೈ’ ಸಿನಿಮಾದ ಮತ್ತೊಂದು ಬೆತ್ತಲೆ ದೃಶ್ಯ ಪೋಸ್ಟ್ ಮಾಡಿದ ನಟಿ ಅಮಲಾ ಪೌಲ್

ಮಂಗಳವಾರ, 21 ಜುಲೈ 2020 (12:33 IST)
ಚೆನ್ನೈ : ಆಗಾಗ ಬೋಲ್ಡ್ ಆಗಿ ಕಾಣಿಸಿಕೊಂಡು ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದ್ದ ನಟಿ ಅಮಲಾ ಪೌಲ್ ಇದೀಗ ತಮಿಳಿನ  ‘ಅಡೈ’ ಸಿನಿಮಾದ ಬೆತ್ತಲೆ ದೃಶ್ಯವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿದ್ದಾರೆ.


ನಟಿ ಅಮಲಾ ಪೌಲ್ ಮೈ ಮೇಲೆ ಬಟ್ಟೆ ಇಲ್ಲದೇ ಕನ್ನಡಿಯನ್ನು ಮೈಗೆ ಮುಚ್ಚಿಕೊಂಡು ಬರುವ ದೃಶ್ಯ ಇದಾಗಿದೆ. ಈ ದೃಶ್ಯವನ್ನು ಅಮಲಾ ಪೌಲ್ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಹಾಗೇ ಈ ದೃಶ್ಯದ ಮಾಡುವ ಮೊದಲು ಅಷ್ಟು ಆಕರ್ಷಕ ಎನಿಸಿರಲಿಲ್ಲ. ಆದರೆ ದೃಶ್ಯವನ್ನು ಮಾಡುವಾಗ ಮನಸ್ಸಿಗೆ ಮುದ ನೀಡಿತು ಎಂದು ತಿಳಿಸಿದ್ದಾರೆ.

ನಟಿ ಅಮಲಾ ಪೌಲ್ ಅವರ ತಮಿಳಿನ  ‘ಅಡೈ’ ಸಿನಿಮಾದ ಈ ದೃಶ್ಯ 2 ನಿಮಿಷ 31 ಸೆಕೆಂಡ್ ಆಗಿದ್ದು, ಈ ವಿಡಿಯೋ ಯೂ ಟ್ಯೂಬ್ ನಲ್ಲಿ 5 ಲಕ್ಷ ಲೈಕ್ಸ್ ಪಡೆದುಕೊಂಡಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ