ಕೇರಳದಲ್ಲಿ ಆನ್ ಲೈನ್ ಶಾಲೆ: ಕನ್ನಡಿಗರಿಗೆ ಅವಕಾಶವಿಲ್ಲ!

ಬುಧವಾರ, 3 ಜೂನ್ 2020 (08:55 IST)
ಮಂಗಳೂರು: ಕೇರಳದಲ್ಲಿ ಸರ್ಕಾರವೇ ಜೂನ್ 1 ರಿಂದ 1 ರಿಂದ 12 ರವರೆಗಿನ ತರಗತಿಗಳಿಗೆ ಆನ್ ಲೈನ್ ತರಗತಿಗಳನ್ನು ಆರಂಭಿಸಲಾಗಿದೆ. ಆದರೆ ಕನ್ನಡಿಗರಿಗೆ ಮಾತ್ರ ಅನ್ಯಾಯವಾಗುತ್ತಿದೆ.


ಪ್ರತ್ಯೇಕ ಟಿವಿ ಚಾನೆಲ್ ಮೂಲಕ 1 ರಿಂದ ಪ್ಲಸ್ ಟು ವರೆಗಿನ ತರಗತಿಗಳನ್ನು ಈಗಾಗಲೇ ಆರಂಭಿಸಲಾಗಿದೆ. ಆದರೆ ಈ ಆನ್ ಲೈನ್ ತರಗತಿಗಳು ಮಲಯಾಳಂ ಮಾಧ‍್ಯಮ ಭಾಷೆಯವರಿಗೆ ಮಾತ್ರ.

ಕಾಸರಗೋಡಿನಲ್ಲಿರುವ ಕೆಲವು ಕನ್ನಡ ಶಾಲೆಗಳಲ್ಲಿ ನೂರಾರು ಕನ್ನಡ ವಿದ್ಯಾರ್ಥಿಗಳಿದ್ದಾರೆ. ಆದರೆ ಆನ್ ಲೈನ್ ಶಿಕ್ಷಣ ಕೇವಲ ಮಲಯಾಳಂ ಮಾಧ‍್ಯಮದವರಿಗೆ ಮಾತ್ರವಾಗಿರುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕನ್ನಡ ಶಾಲೆಗಳು ಈಗಲೂ ಶಾಲೆ ಯಾವಾಗ ತೆರೆಯುತ್ತದೋ ಎಂದು ಕಾದು ನೋಡುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ