ಕಾರಣಿಕದ ಮಧೂರು ಕ್ಷೇತ್ರದಲ್ಲಿ ನಟಿ ಅನುಷ್ಕಾ ಶೆಟ್ಟಿಯಿಂದ ಯಾಗ, 43 ವರ್ಷದ ನಟಿಯ ನೋವೇನು

Sampriya

ಸೋಮವಾರ, 7 ಏಪ್ರಿಲ್ 2025 (17:51 IST)
Photo Courtesy X
ಕಾಸರಗೋಡು: ತೆಲುಗಿನ ಖ್ಯಾತ ನಟ ಅನುಷ್ಕಾ ಶೆಟ್ಟಿ ಅವರು ಇಂದು ಕಾಸರಗೋಡಿನ ಪವರ್‌ಫುಲ್ ದೇವಸ್ಥಾನವಾಗಿರುವ ಮಧೂರು ಮದನಂತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.  

14 ವರ್ಷಗಳ ಬಳಿಕ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು 33 ವರ್ಷಗಳ ಬಳಿಕ ಸಿದ್ದಿವಿನಾಯಕನಿಗೆ ಮೂಡಪ್ಪ ಸೇವೆ ನಡೆಯುತ್ತಿದೆ. ನಟಿ ಅನುಷ್ಕಾ ಶೆಟ್ಟಿ ಕೂಡಾ ಮೂಡಪ್ಪ ಸೇವೆ ಸಲ್ಲಿಸಿ, ವಿಶೇಷ ಪ್ರಾರ್ಥನೆ ನೆರವೇರಿಸಿದ್ದಾರೆ.

ಖ್ಯಾತ ಚಲನಚಿತ್ರ ನಟಿ ಅನುಷ್ಕಾ ಶೆಟ್ಟಿ ಮೂಡಪ್ಪ ಸೇವೆ ಮಾಡಿಸಿದ್ದಾರೆ. 128 ತೆಂಗಿನಕಾಯಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ  ಮಾಡಿಸಿದ್ದು, ಆದರೆ ಕಾರಣಾಂತರಗಳಿಂದ ನಟಿ ಇದರಲ್ಲಿ ಭಾಗಿಯಾಗಿಲ್ಲ. ಇನ್ನೂ ಕ್ಷೇತ್ರದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಲು ಸಾಧ್ಯವಾಗದ ಕಾರಣ ತನ್ನ ಹೆಸರಿನಲ್ಲಿ ಸೇವೆ ಮಾಡಿಸಿದ್ದಾರೆ ಎನ್ನಲಾಗಿದೆ.

ಸಹೋದರನ ಮೂಲಕ ನಟಿ ಅನುಷ್ಕಾ ಶೆಟ್ಟಿ ಯಾಗ ನೆರವೇರಿಸಿದ್ದಾರೆ.  ಕೇರಳದ ಅತ್ಯಂತ ಪುರಾತನ ಕ್ಷೇತ್ರಗಳಲ್ಲಿ ಮಧೂರು ಗಣಪತಿ ಕ್ಷೇತ್ರವೂ ಒಂದಾಗಿದ್ದು, ಗಜಪೃಷ್ಠಾಕೃತಿಯ ಈ ದೇವಸ್ಥಾನವನ್ನು ಪುರಾತನ ಶೈಲಿ
ಗಣಪತಿಯ ಆಶೀರ್ವಾದ ಮತ್ತು ರಕ್ಷಣೆಗಾಗಿ ಹಲವು ಹೋಮಗಳನ್ನು ಮಾಡಲಾಗುತ್ತದೆ. ಅದರಲ್ಲಿ ಅಷ್ಟ ದ್ರವ್ಯ ಗಣಪತಿ ಹೋಮ ಕೂಡ ಒಂದಾಗಿದೆ.

ಈ ಯಾಗವನ್ನು ಮಾಡುವುದರಿಂದ ಸಂಪತ್ತು, ಹಣಕಾಸು, ವ್ಯಾಪಾರ ಮತ್ತು ವೃತ್ತಿ ಜೀವನ ಸುಧಾರಣೆ ಮತ್ತು ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ