ಸ್ಯಾಂಡಲ್ ವುಡ್ ನಲ್ಲಿ ಮೀ ಟು ಅನುಭವ ಬಿಚ್ಚಿಟ್ಟ ನಟಿ ಆಶಿತಾ
ರಘುರಾಮ್ ಅವರ ಜೊತೆಗಿನ ಯೂ ಟ್ಯೂಬ್ ಸಂದರ್ಶನದಲ್ಲಿ ನಟಿ ಆಶಿತಾ ಸ್ಯಾಂಡಲ್ ವುಡ್ ನಲ್ಲಿ ಅವಕಾಶಕ್ಕಾಗಿ ಮಂಚಕ್ಕೆ ಕರೆಯುವ ಅನುಭವ ತನಗಾಗಿತ್ತು. ಅವರ ಆಸೆ ತೀರಿಸಿದರೆ ಮಾತ್ರ ಅವಕಾಶ ಕೊಡುವುದಾಗಿ ಆಮಿಷವೊಡ್ಡಿದ್ದಾಗಿ ಆಶಿತಾ ಹೇಳಿಕೊಂಡಿದ್ದಾರೆ.
ಇದೇ ಕಾರಣಕ್ಕೆ ಚಿತ್ರರಂಗದಿಂದಲೇ ದೂರವಾಗುವ ನಿರ್ಧಾರ ಮಾಡಿದ್ದಾಗಿ ಹೇಳಿದ್ದಾರೆ. ಬಾ ಬಾ ಬಾರೋ ರಸಿಕ, ರೋಡ್ ರೋಮಿಯೋ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದ ಆಶಿತಾ ಬಳಿಕ ಚಿತ್ರರಂಗದಿಂದಲೇ ದೂರವಾದರು. 2005 ರ ನಂತರ ಸಿನಿಮೇತರ ಮಂದಿ ನಿರ್ಮಾಪಕರಾದಾಗ ಅವರು ಬೇರೆ ರೀತಿ ಡಿಮ್ಯಾಂಡ್ ಮಾಡಲು ಶುರು ಮಾಡಿದರು. ಆಗ ಬೇಸರವಾಯಿತು. ಈ ಸವಾಲುಗಳನ್ನು ನನಗೆ ಎದುರಿಸಲು ಸಾಧ‍್ಯವಾಗಲಿಲ್ಲ ಎಂದು ಆಶಿತಾ ಹೇಳಿದರು.