ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ಆರೋಪದಲ್ಲಿ ಖ್ಯಾತ ನಟಿ ಭಾನುಪ್ರಿಯಾ
ಮಂಗಳವಾರ, 5 ಫೆಬ್ರವರಿ 2019 (09:19 IST)
ಚೆನ್ನೈ: ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ಖ್ಯಾತ ನಟಿ ಭಾನುಪ್ರಿಯ ಮೇಲೆ ಮೂವರು ಅಪ್ರಾಪ್ತ ಬಾಲಕಿಯರನ್ನು ಮನೆಗೆಲಸಕ್ಕೆ ಬಳಸಿಕೊಂಡ ಆರೋಪ ಕೇಳಿಬಂದಿದೆ.
15 ವರ್ಷದ ಆಂಧ್ರಪ್ರದೇಶ ಮೂಲದ ಬಾಲಕಿಯರನ್ನು ಭಾನುಪ್ರಿಯಾ ಮನೆಗೆಲಸಕ್ಕೆ ಸೇರಿಸಿಕೊಂಡು ಸರಿಯಾಗಿ ವೇತನವನ್ನೂ ನೀಡದೇ ಮಕ್ಕಳ ಹಕ್ಕು ಉಲ್ಲಂಘನೆ ಮಾಡಿದ್ದಾರೆಂದು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಈ ಸಂಬಂಧ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯವರ್ತಿಯೊಬ್ಬರ ಮೂಲಕ ಭಾನುಪ್ರಿಯಾ ಮನೆಗೆ ಈ ಬಾಲಕಿಯರನ್ನು ಕರೆತರಲಾಗಿದೆ ಎನ್ನಲಾಗಿದೆ. ಹೀಗಾಗಿ ಲೈಂಗಿಕ ಕಿರುಕುಳದ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ.
ಆದರೆ ಬಾಲಕಿಯರ ತಾಯಿಯ ಆರೋಪವನ್ನು ನಿರಾಕರಿಸಿರುವ ನಟಿ ಭಾನುಪ್ರಿಯಾ ನಮ್ಮ ಮನೆಗೆ ಕೆಲಸಕ್ಕೆ ತಂದು ಸೇರಿಸುವಾಗ ಬಾಲಕಿಯ ಕಡೆಯವರು 18 ವರ್ಷ ತುಂಬಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಬಾಲಕಿ ತಮ್ಮ ಮನೆಯಿಂದ ಚಿನ್ನಾಭರಣ, ಇಲೆಕ್ಟ್ರಾನಿಕ್ ವಸ್ತುಗಳನ್ನು ಕದ್ದು ಆಕೆಯ ಮನೆಯವರಿಗೆ ನೀಡಿದ್ದಾಳೆ. ಈ ಆರೋಪಗಳನ್ನು ತಿರುಚಲು ಬಾಲಕಿಯ ಮನೆಯವರು ನಾಟಕವಾಡುತ್ತಿದ್ದಾರೆ ಎಂದು ಭಾನುಪ್ರಿಯಾ ಹೇಳಿದ್ದಾರೆ. ಇದೀಗ ಪೊಲೀಸರು ಸತ್ಯಾಸತ್ಯತೆಯ ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ