ಹಿರಿಯ ನಟಿ ಚಿತ್ರಾ ಹೃದಯಾಘಾತದಿಂದ ನಿಧನ

ಶನಿವಾರ, 21 ಆಗಸ್ಟ್ 2021 (10:40 IST)
ಚೆನ್ನೈ: ದಕ್ಷಿಣ ಭಾರತದ ಜನಪ್ರಿಯ ನಟಿ ಚಿತ್ರಾ ಹೃದಯಾಘಾತದಿಂದ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.


ಮೂಲತಃ ಕೇರಳದವರಾದ ಚಿತ್ರಾ ಬಹುಭಾಷಾ ನಟಿಯಾಗಿದ್ದರು. ಕನ್ನಡದಲ್ಲಿ ‘ಸುಂದರ ಸ್ವಪ್ನಗಳು’, ‘ಕೃಷ್ಣ ಮೆಚ್ಚಿದ ರಾಧೆ’, ‘ಅಜಯ್ ವಿಜಯ್’ ಸಿನಿಮಾದಲ್ಲಿ ನಟಿಸಿದ್ದರು.

100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಚಿತ್ರಾ ಚೆನ್ನೈನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ಸಂಜೆ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ