ಮದುವೆಯ ಬಳಿಕವೂ ಬಹು ಬೇಡಿಕೆಯ ನಟಿ ಎನಿಸಿಕೊಂಡ ನಟಿ ಕಾಜಲ್ ಅಗರ್ವಾಲ್
ಸೋಮವಾರ, 1 ಫೆಬ್ರವರಿ 2021 (10:51 IST)
ಹೈದರಾಬಾದ್ : ಟಾಲಿವಡ್ ನಟಿ ಕಾಜಲ್ ಅಗರ್ವಾಲ್ ಅವರು ಕಳೆದ ವರ್ಷ ಉದ್ಯಮಿ ಗೌತಮ್ ಕಿಚ್ಲು ಜೊತೆ ವಿವಾಹವಾಗಿದ್ದಾರೆ. ಮದುವೆಯ ಬಳಿಕವೂ ಅವರಿಗೆ ಸಿನಿಮಾದಲ್ಲಿ ಆಫರ್ ಕಡಿಮೆಯಾಗಿಲ್ಲ. ಇಂದಿಗೂ ಅವರು ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.
ಮದುವೆಯ ಬಳಿಕ ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆ ಆಚಾರ್ಯ ಚಿತ್ರದ ಚಿತ್ರೀಕರಣವನ್ನು ಮುಂದುವರಿಸಿದ್ದಾರೆ. ಈ ನಡುವೆ ಅವರು ಮತ್ತೊಂದು ಹೊಸ ಚಿತ್ರಕ್ಕ ಸಹಿ ಹಾಕಿದ್ದಾರೆ. ಈ ಚಿತ್ರವನ್ನು ಗುಲೆಬಗವಾಲಿ ಖ್ಯಾತಿಯ ಕಲ್ಯಾಣ್ ನಿರ್ದೇಶಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಈ ಚಿತ್ರದ ಶೂಟಿಂಗ್ ಕೂಡ ಪ್ರಾರಂಭವಾಗಿದೆ. ಅದರ ಜೊತೆಗೆ ಇದೀಗ ಅವರು ಇತ್ತೀಚೆಗೆ ವೆಂಕಟ್ ಪ್ರಭು ನಿರ್ದೇಶನದ ವೆಬ್ ಸರಣಿಗೆ ಸಹಿ ಹಾಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ.