ಗಂಡನಂತೇ ತನ್ನದೇ ಬ್ಯುಸಿನೆಸ್ ಶುರು ಮಾಡಿದ ನಟಿ ಕವಿತಾ ಗೌಡ
ಇದೀಗ ನಟಿ ಕವಿತಾ ಗೌಡ ಕೂಡಾ ಅದೇ ಹಾದಿಯಲ್ಲಿದ್ದಾರೆ. ಕವಿತಾ ಪತಿ, ನಟ ಚಂದನ್ ಕುಮಾರ್ ಈಗಾಗಲೇ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಮೂರು ಹೋಟೆಲ್ ಆರಂಭಿಸಿದ್ದಾರೆ.
ಇದೀಗ ಕವಿತಾ ಕೂಡಾ ಗಂಡನ ಹಾದಿಯಲ್ಲೇ ತೊಡಗಿಸಿಕೊಂಡಿದ್ದು, ನಟನೆ ಜೊತೆಗೆ ಮೇಕ್ ಓವರ್ ಸ್ಟುಡಿಯೋ ಆರಂಭಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಇದನ್ನು ಲಾಂಚ್ ಮಾಡಿದ್ದಾರೆ. ಆ ಮೂಲಕ ಗಂಡನಂತೇ ನಟನಾ ವೃತ್ತಿ ಜೊತೆಗೆ ಸ್ವಂತ ಉದ್ಯಮಕ್ಕೆ ಕೈ ಹಾಕಿದ್ದಾರೆ.