ಸಿಸಿಎಲ್ ಕ್ರಿಕೆಟ್: ಮಲಯಾಳಂ ತಾರೆಯರ ವಿರುದ್ಧ ಇಂದು ಕಿಚ್ಚನ ಟೀಂ ಸ್ಪರ್ಧೆ
ಇಂದು ಜೈಪುರದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಿಚ್ಚ ಸುದೀಪ್ ರ ಕರ್ನಾಟಕ ಬುಲ್ಡೋಜರ್ಸ್ ತಂಡ ಮತ್ತು ಕೇರಳ ಸ್ಟ್ರೈಕರ್ಸ್ ಪರಸ್ಪರ ಹೋರಾಡಲಿದೆ.
ಮೊದಲ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಳ್ ಟೈಗರ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ಕಿಚ್ಚನ ಟೀಂಗೆ ಪ್ರದೀಪ್ ನಾಯಕರಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ಚಂದನ್ ಕುಮಾರ್, ಜಯರಾಮ್ ಕಾರ್ತಿಕ್ ಸೇರಿದಂತೆ ತಂಡದಲ್ಲಿ ಪ್ರಮುಖ ಆಟಗಾರರಿದ್ದಾರೆ. ಈ ಪಂದ್ಯ ರಾತ್ರಿ 7 ಗಂಟೆಗೆ ನಡೆಯಲಿದ್ದು, ಜೀ ಪಿಕ್ಚರ್ಸ್ ನಲ್ಲಿ ನೇರಪ್ರಸಾರವಿರಲಿದೆ.