ಮದುವೆಯ ದಿನವನ್ನು ಮುಂದೂಡಿದ ನಟಿ ಮೆಹ್ರೀನ್ ಕೌರ್ ಪಿರ್ಜಾಡಾ
ಶುಕ್ರವಾರ, 28 ಮೇ 2021 (13:00 IST)
ಚೆನ್ನೈ : ಕಾಲಿವುಡ್ ನಟಿ ಮೆಹ್ರೀನ್ ಕೌರ್ ಪಿರ್ಜಾಡಾ ಅವರು ತಮ್ಮ ಮದುವೆಯ ದಿನವನ್ನು ಮುಂದೂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ನಟಿ ಈ ವರ್ಷದ ಅಂತ್ಯದ ವೇಳೆಗೆ ಅವರು ಭಾವ್ಯಾ ಬಿಷ್ಣೋಯ್ ಅವರನ್ನು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಮದುವೆ ಶೀಘ್ರದಲ್ಲಿ ಆಗುವುದು ಉತ್ತಮವಲ್ಲ ಎಂದು ನಿರ್ಧರಿಸಿದ್ದಾರೆ. ಹೀಗಾಗಿ ಅವರು ತಮ್ಮ ಮದುವೆಯ ದಿನವನ್ನು ಮುಂದೂಡಿದ್ದಾರೆ. ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮದುವೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿರುವುದಾಗಿ ಬಹಿರಂಗಪಡಿಸಿದ್ದಾರೆ.