ಸಾಮಾನ್ಯವಾಗಿ ಸಿನಿಮಾದಲ್ಲಿ ನಟಿಸಬೇಕೆಂದರೆ ನಿರ್ದೇಶಕರು ಷರತ್ತುಗಳನ್ನು ವಿಧಿಸುತ್ತಿರುತ್ತಾರೆ. ಆದರೆ ಹೀರೋಯಿನ್ನೇ ಷರತ್ತುಗಳನ್ನು ಹಾಕುವಷ್ಟರ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ನೀವೇ ಊಹಿಸಿ. ಕಥೆ ಹೀಗೇ ಇರಬೇಕೆಂದು, ಪಾತ್ರ ಈ ತರಹ ಇದ್ದರೆ ಮಾತ್ರ ಅಭಿನಯಿಸುತ್ತೀನೆಂದು, ಬಟ್ಟೆ ಹೀಗೇ ಇರಬೇಕೆಂದು ಕಂಡೀಷನ್ಸ್ ಹಾಕುತ್ತಿರುತ್ತಾರೆ.
ಯಾವುದೇ ಕಾರಣಕ್ಕೂ ಲಿಪ್ ಲಾಕ್ ಮಾಡಲ್ಲ, ಈಜುಡುಗೆ ಹಾಕಿಕೊಳ್ಳಲ್ಲ, ಕೆರಳಿಸುವಂತೆ ತೊಡೆಗಳನ್ನು ತೋರಿಸುವುದಿಲ್ಲ ಎಂದು ಹೇಳುತ್ತಿದ್ದಾರಂತೆ. ’ಇರುಮುಗನ್’ ಚಿತ್ರದ ಬಳಿಕ ಈ ರೀತಿಯ ಷರತ್ತುಗಳನ್ನು ವಿಧಿಸುತ್ತಿದ್ದಾರಂತೆ ನಯನತಾರಾ. ಕಥೆ ಕೇಳುತ್ತಿದ್ದಂತೆ ಸೆನ್ಸಾರ್ ಮಂಡಳಿಯವರಂತೆ ಅಲ್ಲಲ್ಲಿ ಕತ್ತರಿ ಹಾಕುತ್ತಾರೆ ನಯನಿ.