ನಟಿ ನಿಕ್ಕಿ ಗಲ್ರಾನಿ ಹುಟ್ಟುಹಬ್ಬ

ಮಂಗಳವಾರ, 3 ಜನವರಿ 2023 (18:25 IST)
ಕನ್ನಡದ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಅವರಿಗೆ ಇಂದು ಬರ್ತ್​ಡೇ ಸಂಭ್ರಮ. ಅವರಿಗೆ ಈಗ 31 ವರ್ಷ ವಯಸ್ಸು. ಪತಿ ಆದಿ ಪಿನಿಶೆಟ್ಟಿ ಜತೆ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 2022ರ ಮೇ ತಿಂಗಳಲ್ಲಿ ನಿಕ್ಕಿ ಹಾಗೂ ಆದಿ ಪಿನಿಶೆಟ್ಟಿ ಮದುವೆ ಆದರು. ವಿವಾಹದ ಬಳಿಕ ನಿಕ್ಕಿಗೆ ಇದು ಮೊದಲ ವರ್ಷದ ಬರ್ತ್​ಡೇ. ಈ ಕಾರಣಕ್ಕೆ ಹುಟ್ಟುಹಬ್ಬದ ಆಚರಣೆ ಜೋರಾಗಿದೆ. ನಿಕ್ಕಿ ಹಾಗೂ ಆದಿ ಪರಸ್ಪರ ಪ್ರೀತಿಸಿ ಮದುವೆಯಾದರು. ಈ ಜೋಡಿ ಹಾಯಾಗಿ ಜೀವನ ಸಾಗಿಸುತ್ತಿದೆ. ಹೊಸ ವರ್ಷ ಸ್ವಾಗತಿಸಲು ಇವರು ವೆಕೇಶನ್​​ಗೆ ತೆರಳಿದ್ದಾರೆ. ಈಗ ಬರ್ತ್​​ಡೇನೂ ಆಚರಿಸಿಕೊಳ್ಳುತ್ತಿದ್ದಾರೆ. ನಿಕ್ಕಿ ಗಲ್ರಾನಿ ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ಕನ್ನಡದ ಕೆಲವೇ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ