ಬಯಲಾಯ್ತು ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಕಣ್ಣಾಮುಚ್ಚಾಲೆ ಆಟ!

ಮಂಗಳವಾರ, 3 ಜನವರಿ 2023 (08:40 IST)
Photo Courtesy: Twitter
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ, ಇಬ್ಬರೂ ಇತ್ತೀಚೆಗೆ ಮಾಲ್ಡೀವ್ಸ್ ಗೆ ಪ್ರವಾಸ ಮಾಡಿದ್ದರು ಎಂಬಿತ್ಯಾದಿ ಸುದ್ದಿಗಳಾಗಿತ್ತು.

ಆದರೆ ಇದಕ್ಕೆ ಸ್ಪಷ್ಟ ಪುರಾವೆ ಇರಲಿಲ್ಲ. ಆದರೆ ಹೊಸ ವರ್ಷಕ್ಕೆ ಶುಭಾಶಯ ಕೋರುವಾಗ ವಿಜಯ್ ದೇವರಕೊಂಡ ಪ್ರಕಟಿಸಿದ ಫೋಟೋವೊಂದು ಎಲ್ಲವನ್ನೂ ಬಯಲು ಮಾಡಿದೆ.

ವಿಜಯ್ ದೇವರಕೊಂಡ ಪೋಸ್ ಕೊಟ್ಟಿದ್ದ  ಅದೇ ಸ್ಥಳದಲ್ಲೇ ಮಾಲ್ಡೀವ್ಸ್ ಪ್ರವಾಸದ ವೇಳೆ ರಶ್ಮಿಕಾ ಕೂಡಾ ಫೋಟೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಬ್ಬರೂ ಒಂದೇ ಸ್ಥಳದಲ್ಲಿರುವ ಫೋಟೋ ಪ್ರಕಟಿಸಿದ್ದರಿಂದ ಅಂದು ಮಾಲ್ಡೀವ್ಸ್ ಗೆ ಈ ಜೋಡಿ ಜೊತೆಯಾಗಿ ಪ್ರಯಾಣಿಸಿರುವುದು ಪಕ್ಕಾ ಆಗಿದೆ. ಇದೇ ವಿಚಾರಕ್ಕೆ ಈಗ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ