ಸ್ಯಾಂಡಲ್‌ವುಡ್ ನಟಿ ನಿವೀದಿತಾಗೆ ಗೋವಾದಲ್ಲಿ ಕಹಿ ಅನುಭವ ಎದುರಾಗಿದೆ. ಸಾಮಾನ್ಯವಾಗಿ ಗೋವಾ ಎಂದರೆ ಪ್ರೇಮಿಗಳು, ಬಿಕಿನಿ, ಗುಂಡು ತುಂಡುಗೆ ಖ್ಯಾತಿ. ಸುಂದರ ಸಮುದ್ರ ತೀರ, ಮರಳಿನಲ್ಲಿ ಹಾಯಾಗಿ ಮೀಯಲು ಆಗಾಗ ಸಿನಿಮಾ ತಾರೆಗಳು ಗೋವಾಗೆ ಹೋಗುತ್ತಿರುತ್ತಾರೆ.
ಹಾಲಿಡೇ ಎಂಜಾಯ್ ಮಾಡಲು ಹೋಗಿದ್ದ ನಿವೇದಿತಾಗೆ ಗೂಂಡಾಗಳ ತಂಡವೊಂದು ಲೈಂಗಿಕ ಕಿರುಕುಳ ನೀಡಿದೆ. ಸಮುದ್ರ ತೀರದಲ್ಲಿ ಅಡ್ಡಾಡುತ್ತಿರಬೇಕಾದರೆ ಈ ಘಟನೆ ನಡೆದಿದೆ ಎಂದು ನಿವೇದಿತಾ ಹೇಳಿಕೊಂಡಿದ್ದಾರೆ. ಗೋವಾದಲ್ಲಿ ಎರಡು ದಿನ ಉಳಿದುಕೊಳ್ಳಲು, ಅದೂ ಒಂಟಿಯಾಗಿ ನಿರ್ಧರಿಸಿದ್ದರು ನಿವೇದಿತಾ.