ಶೂಟಿಂಗ್ ವೇಳೆ ನಟಿ ಸಂಯುಕ್ತಾ ಹೆಗಡೆಗೆ ತೀವ್ರ ಪೆಟ್ಟು
ಕ್ರೀಮ್ ಎಂಬ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ಕಾಲೆತ್ತಿ ಹೊಡೆಯಲು ಹೋಗಿ ಸಂಯುಕ್ತಾ ಕೆಳಕ್ಕೆ ಬಿದ್ದಿದ್ದಾರೆ. ಬಳಿಕ ತೀವ್ರ ನೋವಿನಿಂದ ಕೂಗಿಕೊಂಡಿದ್ದಾರೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೀಗ ವೈದ್ಯರು 15 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.